Thursday, June 4, 2026
Homeಕರಾವಳಿಉಡುಪಿಬೈಂದೂರಿನಲ್ಲಿ ಕಾರಿನಲ್ಲಿ ಜೀವಂತ ಸುಟ್ಟ ಪ್ರಕರಣ ; ನಾಲ್ವರು ಆರೋಪಿಗಳು 5 ದಿನ ಪೊಲೀಸ್ ವಶಕ್ಕೆ

ಬೈಂದೂರಿನಲ್ಲಿ ಕಾರಿನಲ್ಲಿ ಜೀವಂತ ಸುಟ್ಟ ಪ್ರಕರಣ ; ನಾಲ್ವರು ಆರೋಪಿಗಳು 5 ದಿನ ಪೊಲೀಸ್ ವಶಕ್ಕೆ

- Advertisement -
- Advertisement -

ಬೈಂದೂರು: ಜೀವಂತ ವ್ಯಕ್ತಿಯನ್ನು ಕಾರಿನಲ್ಲಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.‌

ಬೈಂದೂರು ತಾಲೂಕಿನ ಹೇನ್ ಬೇರು ಎಂಬಲ್ಲಿ
ಆನಂದ ಎಂಬ ಅಮಾಯಕ ವ್ಯಕ್ತಿಯನ್ನು ಸದಾನಂದ ಮತ್ತು ಶಿಲ್ಪ ಕಾರಿನಲ್ಲಿ ಸುಟ್ಟು ಹಾಕಿದ್ದರು.

ಆರೋಪಿ ಸದಾನಂದ ಬಾಮೈದರಾದ ಸತೀಶ್ ಮತ್ತು ನಿತಿನ್ ಎಂಬವರಿಂದ ಅಮಾಯಕನ ಕೊಲೆ ಪ್ಲ್ಯಾನ್ ನಡೆಸಲಾಗಿತ್ತು.

ಮಲಯಾಳಂ ಭಾಷೆಯ ಕುರುಪು ಚಿತ್ರವೇ ಪ್ಲ್ಯಾನ್ಡ್ ಮರ್ಡರ್ ಗೆ ಪ್ರೇರಣೆ ಎನ್ನಲಾಗಿದ್ದು, ಕುರುಪು ಚಿತ್ರದಂತೆ ಮೂರನೇ ವ್ಯಕ್ತಿಯನ್ನು ಕೊಂದು ಸುಡುವ ಪ್ಲಾನ್ ಸಂಬಂಧಿಕರು ಕೊಟ್ಟಿದ್ದರು ಎಂದು ಹೇಳಲಾಗಿದೆ.

ಬೈಂದೂರು ತಾಲೂಕು ನ್ಯಾಯಾಲಯಕ್ಕೆ ನಾಲ್ವರು ಆರೋಪಿಗಳನ್ನು ಇಂದು ಹಾಜರು ಪಡಿಸಿದಾಗ
ನಾಲ್ವರು ಆರೋಪಿಗಳು ಐದು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

- Advertisement -

Latest News

error: Content is protected !!