Friday, June 5, 2026
Homeತಾಜಾ ಸುದ್ದಿಮಲಯಾಳಂನ ಹಿರಿಯ ನಟ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ

ಮಲಯಾಳಂನ ಹಿರಿಯ ನಟ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ

- Advertisement -
- Advertisement -

ಚೆನ್ನೈ: ಮಲಯಾಳಂ ಚಿತ್ರರಂಗದಲ್ಲಿ ನಟ ಮತ್ತು ನಿರ್ದೇಶಕನಾಗಿ ತೊಡಗಿಸಿಕೊಂಡಿರುವ ನಟ ಪ್ರತಾಪ್ ಪೋಥೆನ್ (69) ಚೆನ್ನೈ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಎಂದಿನಂತೆ ಮನೆ ಕೆಲಸ ಮಾಡಲು ಕೆಲಸದವರು ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಪ್ರತಾಪ್ ಪೋಫೆನ್ ಮೃತ ದೇಹ ಬೆಡ್‌ರೂಮ್‌ನಲ್ಲಿ ಪತ್ತೆಯಾಗಿದೆ.

100ಕ್ಕೂ ಹೆಚ್ಚು ಮಲಯಾಳಂ, ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಪ್ರತಾಪ್ ಪೋಥೆನ್ ಅಭಿನಯಿಸಿದ್ದು, ಸುಮಾರು 12 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

- Advertisement -

Latest News

error: Content is protected !!