Saturday, June 6, 2026
Homeತಾಜಾ ಸುದ್ದಿಭಾರೀ ಮಳೆ ಹಿನ್ನೆಲೆ: ಜಿಲ್ಲೆಯ ಈ ಶಾಲೆಗಳಿಗೆ ಎರಡು ದಿನ ರಜೆ

ಭಾರೀ ಮಳೆ ಹಿನ್ನೆಲೆ: ಜಿಲ್ಲೆಯ ಈ ಶಾಲೆಗಳಿಗೆ ಎರಡು ದಿನ ರಜೆ

- Advertisement -
- Advertisement -

ಕೊಡಗು: ಭಾರೀ ಮಳೆಯ ಪರಿಣಾಮ ಕೊಡಗು ಜಿಲ್ಲೆಯ ಹಲವೆಡೆ ಜನಜೀವನ ಮತ್ತೆ ಅಸ್ತವ್ಯಸ್ಥಗೊಂಡಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಬುಧವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತಗೊಂಡಿದೆ. ಭಾಗಮಂಡಲ ನಾಪೋಕ್ಲು ರಸ್ತೆ ಮೂರನೇ ಬಾರಿ ಜಲಾವೃತಗೊಂಡು ಸಂಪರ್ಕ ಕಡಿತವಾಗಿದೆ.

ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಮಡಿಕೇರಿ ತಾಲೂಕಿನ ಬಲಮುರಿ ಕೆಳ ಸೇತುವೆ ಮುಳುಗಡೆಗೊಂಡಿದ್ದು 2 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಭೂಕುಸಿತದ ಭೀತಿಯಿರುವ ತೋರದ 14 ಕುಟುಂಬದ 34 ಜನರನ್ನು ತೋರ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜು,15, 16ರಂದು ರಜೆ ಘೋಷಿಸಲಾಗಿದೆ.

- Advertisement -

Latest News

error: Content is protected !!