- Advertisement -
![]()
- Advertisement -
ಮಂಗಳೂರು : ಕುರ್ನಾಡು ಸಮೀಪದ ಮಿತ್ತಕೋಡಿಯಲ್ಲಿ ಮತ್ತೆ ಭೂಕುಸಿತ ಉಂಟಾಗಿದ್ದು, ಮಿತ್ತಕೋಡಿ ಅರ್ಕಾನ ರಸ್ತೆ ಬಂದ್ ಆಗಿದೆ.
ಕುರ್ನಾಡು ಮಿತ್ತಕೋಡಿಯಿಂದ ಅರ್ಕಾನ ಕಂಬಳ ಪದವಿಗೆ ಹೋಗುವ ರಸ್ತೆಯಲ್ಲಿ ಇತ್ತೀಚೆಗೆಯಷ್ಟೇ ಭೂಕುಸಿತ ಉಂಟಾಗಿ ರಸ್ತೆ ಬಂದ್ ಆಗಿತ್ತು.
ಇದೀಗ ಮತ್ತೆ ಇಂದು ಎಡಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಭೂ ಕುಸಿತ ಉಂಟಾಗಿ ರಸ್ತೆ ಬಂದ್ ಆಗಿ ಸಂಚಾರ ಅಸ್ತವ್ಯಸ್ತವಾಗಿದೆ.
ವಿದ್ಯುತ್ ಕಂಬಗಳೂ ಉರುಳಿ ಬಿದ್ದಿವೆ. ಅಲ್ಲದೆ ಈ ಪ್ರದೇಶದಲ್ಲಿ ಇನ್ನಷ್ಟು ಗುಡ್ಡ ಪ್ರದೇಶಗಳು ಕುಸಿಯು ಭೀತಿಯಲ್ಲಿವೆ
- Advertisement -


