Wednesday, June 3, 2026
Homeಕರಾವಳಿಮೂಡಬಿದಿರೆ ಸಮೀಪದ ಇರುವೈಲ್ ನಲ್ಲಿ ಮಳೆಗೆ ಮನೆ ಕುಸಿತ

ಮೂಡಬಿದಿರೆ ಸಮೀಪದ ಇರುವೈಲ್ ನಲ್ಲಿ ಮಳೆಗೆ ಮನೆ ಕುಸಿತ

- Advertisement -
- Advertisement -

ಮೂಡಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ‌ ಆರ್ಭಟ ಮುಂದುವರಿದಿದ್ದು, ಮೂಡಬಿದಿರೆ ಸಮೀಪದ ಇರುವೈಲ್‌ನಲ್ಲಿ ಮನೆ ಕುಸಿದಿದೆ.

ಇರುವೈಲ್ ಪಂಜ ನಿವಾಸಿ ಪ್ರಶಾಂತ್ ಎಂಬವರ ಮನೆ ಕುಸಿತಗೊಂಡಿದ್ದು, ಮೊದಲೇ ಮನೆಯಿಂದ ಹೊರ ಬಂದಿದ್ದರಿಂದ‌ ಪ್ರಾಣಾಪಾಯ ತಪ್ಪಿದೆ.

ಮಳೆಯ ಹೊಡೆತಕ್ಕೆ ಪ್ರಶಾಂತ್ ಅವರಿಗೆ ಸೇರಿದ ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ.

ಹೀಗಾಗಿ ಅಡಕೆ ತೋಟದ ಮೇಲ್ಭಾಗದಲ್ಲಿದ್ದ ಪ್ರಶಾಂತ್ ಅವರ ಮನೆ ಕುಸಿದು ಬಿದ್ದಿದೆ. ಮುನ್ನೆಚ್ಚರಿಕೆ ವಹಿಸಿದ್ದ ಕಾರಣ ಪ್ರಶಾಂತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!