Friday, June 5, 2026
Homeಕರಾವಳಿಮಂಗಳೂರು: ಏರ್​ಪೋರ್ಟ್ ರನ್​ವೇ ಬದಿಯಲ್ಲೇ ರಸ್ತೆ ಕುಸಿತ

ಮಂಗಳೂರು: ಏರ್​ಪೋರ್ಟ್ ರನ್​ವೇ ಬದಿಯಲ್ಲೇ ರಸ್ತೆ ಕುಸಿತ

- Advertisement -
- Advertisement -

 ಮಂಗಳೂರು: ಕರಾವಳಿಯಲ್ಲಿ ವರುಣನ ರೌದರಾವತಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ಮಣ್ಣು ಕುಸಿತ ಪ್ರಕರಣಗಳು ಕಂಡು ಬರುತ್ತಿವೆ.ಏರ್​ಪೋರ್ಟ್ ರನ್​ವೇ ಬದಿಯಲ್ಲೇ ರಸ್ತೆ ಕುಸಿದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅದ್ಯಪಾಡಿ ಬಳಿ ಇರುವ ರನ್ ವೇ ಸಮೀಪ ಕುಸಿತವಾಗಿದ್ದು, ಈ ಹಿನ್ನೆಲೆ ಅದ್ಯಪಾಡಿಯಿಂದ ಕೈ ಕಂಬ ಹೋಗುವ ರಸ್ತೆ ಬಂದ್ ಮಾಡಲಾಗಿದೆ.

ಏರ್​​ರ್ಪೋರ್ಟ್ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕ ಮಳೆ, ನೀರಿನ ಹೊರಹೊಮ್ಮುವಿಕೆಯಿಂದ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ. ನಗರದಲ್ಲಿ ಭಾರೀ ಮಳೆ‌ ಮುಂದುವರೆದಿದೆ. ಮಂಗಳೂರು ವಿಮಾನ ನಿಲ್ದಾಣವು ಸೂಕ್ಷ್ಮ ಟೇಬಲ್ ಟಾಪ್ ರನ್​ವೇ ಹೊಂದಿರುವುದರಿಂದ ಈ ವಿದ್ಯಮಾನ ದೇಶದ ಗಮನ ಸೆಳೆದಿದೆ.

- Advertisement -

Latest News

error: Content is protected !!