Thursday, June 4, 2026
Homeಕರಾವಳಿಬೆಳ್ತಂಗಡಿ: ತೋಟಕ್ಕೆಂದು ಹೋದ ವ್ಯಕ್ತಿ ನಾಪತ್ತೆ ಪ್ರಕರಣ: ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಬೆಳ್ತಂಗಡಿ: ತೋಟಕ್ಕೆಂದು ಹೋದ ವ್ಯಕ್ತಿ ನಾಪತ್ತೆ ಪ್ರಕರಣ: ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

- Advertisement -
- Advertisement -

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಅಡ್ಯ ನಿವಾಸಿ ಲಿಂಗಪ್ಪ ಪೂಜಾರಿ(65 ) ಎಂಬವರು ಜೂ.30 ರಂದು ತೋಟಕ್ಕೆಂದು ಹೋದವರು ಮನೆಗೆ ವಾಪಾಸು ಹಿಂದಿರುಗದೆ ಕಾಣೆಯಾಗಿದ್ದರು ಇಂದು ಇವರ ಶವ ನದಿಯಲ್ಲಿ ಪತ್ತೆಯಾಗಿದೆ.

ಇವರು ತೋಟಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದು ವಾಪಾಸು ಹಿಂದಿರುಗದೇ ಇದ್ದಾಗ ಗಾಬರಿಗೊಂಡ ಮನೆಯವರು ಹುಡುಕಾಟ ನಡೆಸಿದ್ದರು

ಜೂ.30 ರಂದು ಸುರಿದ ಭಾರೀ ಮಲೆಯಿಂದಾಗಿ ತೋಟದ ಕಡೆ ಹೋಗುವಾಗ ತೊಟದ ಪಕ್ಕದಲ್ಲಿರುವ ನದಿಗೆ ಕಾಲು ಜಾರಿ ಬಿದ್ದು ನೀರಲ್ಲಿ ಕೊಚ್ಚಿಹೋಗಿರಬಹುದು ಎಂದು ಶಂಕಿಸಲಾಗಿತ್ತು

ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ , ಅಗ್ನಿಶಾಮಕದಳ, ಸ್ಥಳೀಯರು ಧಾವಿಸಿ ಹುಡುಕಾಟ ನಡೆಸುತ್ತಿದ್ದರುಲ. ಇನ್ನೂ ಯಾವುದೇ ಸುಳಿವು ಲಭ್ಯವಾಗಿರಲ್ಲಿಲ್ಲ ಇಂದು ಬೆಳಗ್ಗೆ ಮಡ್ಯ ಎಂಬಲ್ಲಿ ನದಿಯಲ್ಲಿ ತೇಲುತ್ತಿತ್ತು .ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ನಂತರ ಪೊಲೀಸರು ಪರಿಶೀಲನೆ ನಡೆಸಿ ಶವ ಮೇಲಕ್ಕೆತ್ತಿದ್ದು ಬೆಳ್ತಂಗಡಿ ಶವಗಾರಕ್ಕೆ ಸಾಗಿಸಿದ್ದಾರೆ‌ ,ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!