Saturday, May 18, 2024
Homeತಾಜಾ ಸುದ್ದಿರಾಜ್ಯಗಳಿಂದ ಸಾಲದ ಮೇಲೆ ಸಾಲ: 'ಶ್ರೀಲಂಕಾ ರೀತಿಯಲ್ಲಿ ದಿವಾಳಿಯಾಗ್ತೀರಿ' ಎಂದು ಎಚ್ಚರಿಕೆ ನೀಡಿದ ಕೇಂದ್ರ

ರಾಜ್ಯಗಳಿಂದ ಸಾಲದ ಮೇಲೆ ಸಾಲ: ‘ಶ್ರೀಲಂಕಾ ರೀತಿಯಲ್ಲಿ ದಿವಾಳಿಯಾಗ್ತೀರಿ’ ಎಂದು ಎಚ್ಚರಿಕೆ ನೀಡಿದ ಕೇಂದ್ರ

spot_img
- Advertisement -
- Advertisement -

ಕೇಂದ್ರ ಸರಕಾರ ಹಲವಾರು ರಾಜ್ಯಗಳ ಆತಂಕಕಾರಿ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿನ ಆರ್ಥಿಕ ಬಿಕ್ಕಟ್ಟನ್ನು ಉಲ್ಲೇಖಿಸಿ ಈ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಜೂನ್ 16-17 ರಂದು ಧರ್ಮಶಾಲಾದಲ್ಲಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಡೆದ ಕೇಂದ್ರದ ಉನ್ನತ ಮಟ್ಟದ ಸಭೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ಹಲವಾರು ರಾಜ್ಯಗಳು ಹೆಚ್ಚಿನ ಬಜೆಟ್ ಸಾಲಗಳು, ಭವಿಷ್ಯದ ಆದಾಯ ನಂಬಿ ಸಾಲ ಮಾಡುವುದು, ಆಸ್ಪತ್ರೆಗಳು, ನ್ಯಾಯಾಲಯಗಳು ಮತ್ತು ಉದ್ಯಾನವನಗಳಂತಹ ಸಾರ್ವಜನಿಕ ಆಸ್ತಿಗಳನ್ನು ಅಡಮಾನ ಇಟ್ಟು ಸಾಲ ಪಡೆದಿವೆ. ಜತೆಗೆ ವಿದ್ಯುತ್ ಬಾಕಿಗಳೂ ಹೆಚ್ಚಿನ ಪ್ರಮಾಣದಲ್ಲಿರುವ ರಾಜ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಗಿದ್ದು, ರಾಜ್ಯಗಳಿಗೆ ಅಪಾಯದ ಮುನ್ಸೂಚನೆ ನೀಡಲಾಗಿದೆ.

ಇತ್ತೀಚೆಗೆ ಆರ್‌ಬಿಐ ಕೂಡ ಸಾಲಕ್ಕೆ ಸಂಬಂಧಿಸಿದಂತೆ ರಾಜ್ಯಗಳ ಹಣಕಾಸಿನ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಸಭೆಯಲ್ಲಿ ಮಂಡಿಸಲಾದ ಹಣಕಾಸು ಸಚಿವಾಲಯದ ವರದಿಯಲ್ಲಿ ರಾಜ್ಯಗಳ ಚಿಂತಾಜನಕ ಆರ್ಥಿಕ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಲಾಗಿದೆ. ಅದರಲ್ಲೂ ಮುಖ್ಯವಾಗಿ ಬ್ಯಾಲೆನ್ಸ್ ಶೀಟ್ ಹೊರತಾದ/ ಬಜೆಟೇತರ ಸಾಲಗಳ ಬಗ್ಗೆ ಗಂಭೀರ ಚರ್ಚೆ ನಡೆದಿದೆ.

ಕೆಲವು ರಾಜ್ಯಗಳಂತೂ ಪಾರ್ಕ್‌ಗಳು, ಡಿಸಿ ಕಚೇರಿ, ತಾಲೂಕು ಕಚೇರಿಗಳು, ನ್ಯಾಯಾಲಯಗಳು, ಆಸ್ಪತ್ರೆಗಳನ್ನು ಅಡವಿಟ್ಟು ಸಾಲ ಪಡೆಯುತ್ತಿವೆ. ಸಾಲಗಳನ್ನು ಪೂರೈಸಲು ಆದಾಯದ ಮಾರ್ಗಗಳನ್ನು ಹೊಂದಿರದ ಸಂಸ್ಥೆಗಳೂ ರಾಜ್ಯ ಸರ್ಕಾರದ ಖಾತರಿ, ಭೂಮಿಯ ಭದ್ರತೆಯ ಆಧಾರದ ಮೇಲೆ ಸಾಲವನ್ನು ಪಡೆಯುತ್ತಿವೆ,” ಎಂದು ಸಭೆಯಲ್ಲಿ ಹೇಳಲಾಗಿದೆ.

2019-20 ಮತ್ತು 2021-22ರ ನಡುವೆ ಭವಿಷ್ಯದ ಆದಾಯವನ್ನು ಹೆಚ್ಚಿಸುವ ಹೆಸರಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ಸಂಗ್ರಹಿಸಿದ ರಾಜ್ಯಗಳಲ್ಲಿ ತೆಲಂಗಾಣ, ಉತ್ತರ ಪ್ರದೇಶ, ಪಂಜಾಬ್, ಮಧ್ಯ ಪ್ರದೇಶ ಮತ್ತು ಹಿಮಾಚಲ ಪ್ರದೇಶ ಮುಂಚೂಣಿಯಲ್ಲಿವೆ. ಆಂಧ್ರ ಪ್ರದೇಶದ ನಿಧಿಯ ಕ್ರೋಢೀಕರಣವು 2022-23ರಲ್ಲಿ ಅದರ ಯೋಜಿತ ಜಿಎಸ್‌ಡಿಪಿಯ ಶೇ. 1.88ರಷ್ಟಿದ್ದರೆ, ಉತ್ತರ ಪ್ರದೇಶದಲ್ಲಿ ಶೇ. 0.87, ಪಂಜಾಬ್‌ನಲ್ಲಿ ಜಿಎಸ್‌ಡಿಪಿಯ ಶೇ. 0.46, ಮಧ್ಯ ಪ್ರದೇಶದಲ್ಲಿ ಶೇ. 0.21 ಮತ್ತು ಹಿಮಾಚಲ ಪ್ರದೇಶದಲ್ಲಿ ಜಿಎಸ್‌ಡಿಪಿಯ ಶೇ. 0.05ರಷ್ಟಿದೆ.

- Advertisement -
spot_img

Latest News

error: Content is protected !!