Wednesday, June 3, 2026
Homeತಾಜಾ ಸುದ್ದಿಆಗಸ್ಟ್  ನಲ್ಲಿ ಬಿಗ್ ಬಾಸ್ ಸೀಸನ್ 9 ಆರಂಭ

ಆಗಸ್ಟ್  ನಲ್ಲಿ ಬಿಗ್ ಬಾಸ್ ಸೀಸನ್ 9 ಆರಂಭ

- Advertisement -
- Advertisement -

ಬೆಂಗಳೂರು: ‘ಬಿಗ್ ಬಾಸ್’ನ ಒಂಬತ್ತನೇ ಸೀಸನ್ ಯಾವಾಗ ಎಂಬ ಕುತೂಹಲ ಪ್ರೇಕ್ಷಕರ ಕುತೂಹಲಕ್ಕೆ ತೆರೆ ಬೀಳುವ ಸಮಯ ಸನ್ನಿಹಿತವಾಗಿದೆ. ಆಗಸ್ಟ್​ ಕೊನೆಯಲ್ಲಿ ಒಂಬತ್ತನೇ ಸೀಸನ್ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

ವಿಶೇಷವೆಂದರೆ, ಈ ಬಾರಿ ‘ಬಿಗ್ ಬಾಸ್’ ಎರಡು ಸೀಸನ್​ಗಳಲ್ಲಿ ನಡೆಯಲಿದೆ. ಒಂದು ಮಿನಿ, ಇನ್ನೊಂದು ದೊಡ್ಡ ಸೀಸನ್. ಈ ಪೈಕಿ ಮಿನಿ, ವೂಟ್​ನಲ್ಲಿ ಆಗಸ್ಟ್ ನಿಂದ ಪ್ರಸಾರವಾಗಲಿದೆ. ಅದು ಅಕ್ಟೋಬರ್​ನಲ್ಲಿ ಮುಗಿಯಲಿದ್ದು, ಅಲ್ಲಿಂದ ದೊಡ್ಡ ಸೀಸನ್ ಕಲರ್ಸ್ ಕನ್ನಡದಲ್ಲಿ ಎಂದಿನಂತೆ ಪ್ರಸಾರವಾಗಲಿದೆ. ಮೊದಲ ಸೀಸನ್ 42 ದಿನಗಳದ್ದಾಗಿರುತ್ತದೆ ಮತ್ತು ಎರಡನೆಯದು ಎಂದಿನಂತೆ 100ನೇ ದಿನಕ್ಕೆ ಮುಗಿಯಲಿದೆ. ಎರಡೂ ಕಾರ್ಯಕ್ರಮಗಳನ್ನು ಸುದೀಪ್ ಅವರೇ ನಡೆಸಿಕೊಡುತ್ತಿದ್ದಾರೆ. ಓಟಿಟಿಯಲ್ಲಿ ಪ್ರಸಾರವಾಗುವ ಮಿನಿ ಸೀಸನ್​ನಲ್ಲಿ, ಸಾಮಾಜಿಕ ಜಾಲತಾಣಗಳ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರಂತೆ. ಅಲ್ಲಿನ ನಾಲ್ಕೈದು ಜನ ಟಿವಿ ಕಾರ್ಯಕ್ರಮಕ್ಕೂ ಹಾರಲಿದ್ದಾರೆ. ಅವರ ಜತೆಗೆ ಎಂದಿನಂತೆ ಕರ್ನಾಟಕದ ಹಲವು ಜನಪ್ರಿಯ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಈ ಬಾರಿಯ ಸೀಸನ್​ಗಳನ್ನು ಬಹಳ ಚೆನ್ನಾಗಿ ಪ್ಲಾನ್ ಮಾಡಿದ್ದಾರೆ ಎನ್ನುವ ಸುದೀಪ್, ಕಾರ್ಯಕ್ರಮ ವಿಶೇಷವಾಗಿರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ‘ಒಂದರಹಿಂದೊಂದು ಎರಡು ಸೀಸನ್​ಗಳಾಗಿರುವುದರಿಂದ ದೊಡ್ಡ ಸವಾಲು. ನಾನು ಎರಡೂ ಕಾರ್ಯಕ್ರಮಗಳ ವಾರಾಂತ್ಯದ ಎಪಿಸೋಡ್​ಗಳನ್ನು ನಿರೂಪಣೆ ಮಾಡಲಿದ್ದೇನೆ. ಸಾಮಾನ್ಯವಾಗಿ ಶನಿವಾರ ಬೆಳಿಗ್ಗೆಯ ಹೊತ್ತಿಗೆ ವಾರದ ಎಲ್ಲಾ ಎಪಿಸೋಡ್​ಗಳನ್ನು ನೋಡಿಕೊಂಡಿರುತ್ತೇನೆ. ಶನಿವಾರ ಬೆಳಿಗ್ಗೆ ಎಲಿಮಿನೇಶನ್ ಸುತ್ತಿನ ಚಿತ್ರೀಕರಣ ನಡೆಯುತ್ತದೆ. ಅದು ಸಂಜೆಯೇ ಪ್ರಸಾರವಾಗುತ್ತದೆ. ಇನ್ನು, ಸ್ಟೇಜ್ ಕಾರ್ಯಕ್ರಮದ ಚಿತ್ರೀಕರಣ ಶನಿವಾರ ರಾತ್ರಿ ಮುಗಿದು, ಭಾನುವಾರ ಪ್ರಸಾರವಾಗುತ್ತದೆ. ಅಷ್ಟೂ ಕಂತುಗಳನ್ನು ಪೂರ್ತಿ ನೋಡಿರುತ್ತೇನೆ. ಯಾವುದನ್ನೂ ಫಾರ್ವರ್ಡ್ ಮಾಡುವುದಿಲ್ಲ’ ಎಂದು ಸುದೀಪ್ ಹೇಳಿದ್ದಾರೆ.

ಜುಲೈ 28ಕ್ಕೆ ಬಿಡುಗಡೆಯಾಗಲಿರುವ ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರದಲ್ಲಿ ಸದ್ಯ ತೊಡಗಿಸಿಕೊಂಡಿರುವ ಸುದೀಪ್, ಆ ಚಿತ್ರ ಬಿಡುಗಡೆಯಾದ ನಂತರ ‘ಬಿಲ್ಲ ರಂಗ ಬಾಷಾ’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

- Advertisement -

Latest News

error: Content is protected !!