Sunday, May 19, 2024
Homeಕರಾವಳಿಮತ್ತೊಂದು ಮೈಲುಗಲ್ಲು ಸಾಧಿಸಿದ ನವ ಮಂಗಳೂರು ಬಂದರು : ಪ್ರಥಮ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

ಮತ್ತೊಂದು ಮೈಲುಗಲ್ಲು ಸಾಧಿಸಿದ ನವ ಮಂಗಳೂರು ಬಂದರು : ಪ್ರಥಮ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

spot_img
- Advertisement -
- Advertisement -

ಮಂಗಳೂರು: ನವ ಮಂಗಳೂರು ಬಂದರು ಇದೀಗ ಮಹತ್ವದ ಇನ್ನೊಂದು ಮೈಲುಗಲ್ಲು ದಾಖಲಿಸಿದೆ. ಪ್ರಥಮ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮಿಸಿದೆ.

276.5 ಮೀಟರ್‌ ಉದ್ದವಿರುವ ಎಂಎಸ್‌ಸಿ ಎರ್ಮಿನಿಯಾ ಹಡಗು ಭಾನುವಾರ ಆಗಮಿಸುವ ಮೂಲಕ ನವ ಮಂಗಳೂರು ಬಂದರಿನಲ್ಲಿ ಮೈನ್‌ಲೈನ್‌ ಕಂಟೈನರ್‌ ಹಡಗು ಅಧ್ಯಾಯ ಆರಂಭಗೊಂಡಿತು. ಈ ಹಡಗು 1,771 ಟಿಇಯು (ಟ್ವೆಂಟಿ ಫೂಟ್‌ ಈಕ್ವಲೆಂಟ್‌ ಯೂನಿಟ್‌) ಹಾಗೂ 1,265 ಪ್ರಮುಖ ಕಂಟೈನರ್‌ಗಳನ್ನು ಸಾಗಿಸುತ್ತದೆ.

ಹಡಗನ್ನು ಸಾಂಪ್ರದಾಯಿಕ ಜಲಫಿರಂಗಿ (ವಾಟರ್‌ ಕ್ಯಾನನ್‌) ಸ್ವಾಗತದ ಮೂಲಕ ಬರಮಾಡಿಕೊಳ್ಳ ಲಾಯಿತು. ಕಂಟೈನರ್‌ ನಿರ್ವಹಣೆಗೆ ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ| ವೆಂಕಟರಮಣ ಅಕ್ಕರಾಜು ಅವರು ಹಸುರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಭಾನುವಾರ ಸಂಜೆ ಆಗಮಿಸಿದ ಹಡಗು ಸರಕುಗಳನ್ನು ಹೇರಿಕೊಂಡು ಸೋಮವಾರ ಅಥವಾ ಮಂಗಳ ವಾರ ನಿರ್ಗಮಿಸುವ ಸಾಧ್ಯತೆಗಳಿವೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಬಂದರಿಗೆ ಮೈನ್‌ಲೈನ್‌ ಕಂಟೈನರ್‌ ಸಾಗಾಟ ಹಡಗು ಆಗಮಿಸಬೇಕಾದರೆ ಅದಕ್ಕೆ ಬೇಕಾಗುವಷ್ಟು ಕಂಟೈನರ್‌ ಸರಕು ಅವಶ್ಯವಿರುತ್ತದೆ. ಇಲ್ಲದಿದ್ದರೆ ಮಧ್ಯಮ ಗಾತ್ರದ ಹಡಗುಗಳಲ್ಲಿ ಇದನ್ನು ತುಂಬಿಸಿ ಇತರ ಬಂದರಿಗೆ ಕೊಂಡೊಯ್ದು ಅಲ್ಲಿ ಮೈನ್‌ಲೈನ್‌ ಕಂಟೈನರ್‌ ಹಡಗಿಗೆ ತುಂಬಿಸಲಾ ಗುತ್ತದೆ. ಈಗ ನವಮಂಗಳೂರು ಬಂದರಿನಲ್ಲೇ ಅವಶ್ಯವಿರುವಷ್ಟು ಸರಕು ಲಭ್ಯತೆ ಹಿನ್ನೆಲೆಯಲ್ಲಿ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮಿಸಿದೆ.

- Advertisement -
spot_img

Latest News

error: Content is protected !!