Friday, June 5, 2026
Homeಕರಾವಳಿಬೆಳ್ತಂಗಡಿ: ಪುದುವೆಟ್ಟುವಿನಲ್ಲಿ ತೋಟಕ್ಕೆಂದು ತೆರಳಿದ ವ್ಯಕ್ತಿ ಮನೆಗೆ ವಾಪಾಸ್ಸಾಗದೇ ನಾಪತ್ತೆ

ಬೆಳ್ತಂಗಡಿ: ಪುದುವೆಟ್ಟುವಿನಲ್ಲಿ ತೋಟಕ್ಕೆಂದು ತೆರಳಿದ ವ್ಯಕ್ತಿ ಮನೆಗೆ ವಾಪಾಸ್ಸಾಗದೇ ನಾಪತ್ತೆ

- Advertisement -
- Advertisement -

ಬೆಳ್ತಂಗಡಿ: ತೋಟಕ್ಕೆಂದು ತೆರಳಿದ ವ್ಯಕ್ತಿ ಮನೆಗೆ ವಾಪಾಸ್ಸಾಗದೇ ನಾಪತ್ತೆಯಾಗಿರುವ ಘಟನೆ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ. ಅಡ್ಯ ನಿವಾಸಿ ಲಿಂಗಪ್ಪ ಪೂಜಾರಿ(65 ವ) ಎಂಬವರು ನಿನ್ನೆ (ಜೂ.30) ತೋಟಕ್ಕೆಂದು ಹೋದವರು  ಮನೆಗೆ ವಾಪಾಸ್ಸಾಗದೇ ಕಾಣೆಯಾಗಿದ್ದಾರೆ.

ತೋಟಕ್ಕೆ ಹೋಗಿ ಬರುವುದಾಗಿ  ಹೇಳಿ ಮನೆಯಿಂದ  ಹೋಗಿದ್ದು ಮನೆಗೆ ವಾಪಾಸ್ ಬಾರದೇ ಇದ್ದಾಗ ಗಾಬರಿಗೊಂಡ ಮನೆಯವರು ಹುಡುಕಾಟ ನಡೆಸಿದ್ದಾರೆ. ಇನ್ನು ನಿನ್ನೆ  ಸುರಿದ ಭಾರೀ ಮಳೆಯಿಂದಾಗಿ ತೋಟದ ಕಡೆ ಹೋಗುವಾಗ ತೋಟದ ಪಕ್ಕದಲ್ಲಿರುವ ನದಿಗೆ ಕಾಲು ಜಾರಿ ಬಿದ್ದು ನೀರಲ್ಲಿ ಕೊಚ್ಚಿಹೋಗಿರಬಹುದು ಎಂದು ಶಂಕಿಸಲಾಗಿದೆ .

ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ , ಅಗ್ನಿಶಾಮಕದಳ, ಸ್ಥಳೀಯರು ಧಾವಿಸಿ  ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಯಾವುದೇ ಸುಳಿವು ಲಭ್ಯವಾಗಿಲ್ಲ.

- Advertisement -

Latest News

error: Content is protected !!