Thursday, June 4, 2026
Homeತಾಜಾ ಸುದ್ದಿಮಂಗಳೂರು: ಖ್ಯಾತ ಉದ್ಯಮಿ ಎಂ.ಅಣ್ಣಪ್ಪ ಪೈ ನಿಧನ

ಮಂಗಳೂರು: ಖ್ಯಾತ ಉದ್ಯಮಿ ಎಂ.ಅಣ್ಣಪ್ಪ ಪೈ ನಿಧನ

- Advertisement -
- Advertisement -

ಮಂಗಳೂರು : ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದ ಉದ್ಯಮಿ ಎಂ. ಅಣ್ಣಪ್ಪ ಪೈ (74) ಅವರು ಅನಾರೋಗ್ಯದಿಂದ ಜೂ.29ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಪುತ್ರರಾದ ಡೆಲಿವರಿ ಸಂಸ್ಥೆಯ ನಿರ್ದೇಶಕರಾದ ಅಜಿತ್ ಪೈ ಹಾಗೂ ಅರವಿಂದ್ ಪೈ ಅವರನ್ನು ಅಗಲಿದ್ದಾರೆ. ಸಾಹುಕಾರ್ ಬಾಬಾ ಪೈ ಮನೆತನಕ್ಕೆ ಸೇರಿದ ಅವರು ಏಸ್ ಫುಡ್ಸ್ ಹಾಗೂ ಮಾಡರ್ನ್ ಕಿಚನ್ ಉದ್ಯಮಗಳ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಮತ್ತು ಆ‌ಆರ್ ಪೈ ಆ್ಯಂಡ್ ಕಂಪೆನಿಯ ಪಾಲುದಾರರಾಗಿದ್ದರು. ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ದಾನಿಯೂ, ಜನಾನುರಾಗಿಯಾಗಿದ್ದ ಅವರು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿ ಜನಪರ ಕಾಳಜಿ ಹೊಂದಿದ್ದರು.

ಮಣ್ಣಗುಡ್ಡೆಯ ಅವರ ಸ್ವಗೃಹದಲ್ಲಿ ಇಂದು ಮಧ್ಯಾಹ್ನ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ

- Advertisement -

Latest News

error: Content is protected !!