Wednesday, June 3, 2026
Homeಕರಾವಳಿಮೂಡಬಿದರೆ: ಹತ್ತುವ ಮೊದಲೇ ಚಲಿಸಿದ ಖಾಸಗಿ ಬಸ್: ಪುಟ್ ಬೋರ್ಡ್ ನಿಂದ ಜಾರಿ ರಸ್ತೆಗೆ ಬಿದ್ದ...

ಮೂಡಬಿದರೆ: ಹತ್ತುವ ಮೊದಲೇ ಚಲಿಸಿದ ಖಾಸಗಿ ಬಸ್: ಪುಟ್ ಬೋರ್ಡ್ ನಿಂದ ಜಾರಿ ರಸ್ತೆಗೆ ಬಿದ್ದ ವಿದ್ಯಾರ್ಥಿ

- Advertisement -
- Advertisement -

ಮೂಡಬಿದಿರೆ: ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕನ ನಿರ್ಲಕ್ಷ್ಯದಿಂದ ಬಸ್ ಹತ್ತುತ್ತಿದ್ದ ವಿದ್ಯಾರ್ಥಿನಿ ಬಿದ್ದ ಘಟನೆ ನಡೆದಿದೆ. ವಿದ್ಯಾರ್ಥಿನಿ ಬಸ್ ನ ಒಳಗೆ ಹತ್ತುವ ಮೊದಲೇ ಬಸ್ ಚಲಿಸಿದ ಕಾರಣ ವಿದ್ಯಾರ್ಥಿನಿ ಬಸ್ ನಿಂದ ಕೆಳಗೆ ಬಿದ್ದಿದ್ದಾಳೆ.

ಮೂಡಬಿದ್ರೆಯ ಆಳ್ವಾಸ್ ‌ಕಾಲೇಜು ಬಳಿ ಘಟನೆ ಸಂಭವಿಸಿದೆ. ಕಾಲೇಜು ವಿದ್ಯಾರ್ಥಿನಿಯರು ಬಸ್ ಹತ್ತುತ್ತಿದ್ದ ವೇಳೆ ಬಸ್ ಚಾಲಕನ ಅವಸರಕ್ಕೆ ಫುಟ್ ಬೋರ್ಡ್ ನಿಂದ ಆಯ ತಪ್ಪಿ ವಿದ್ಯಾರ್ಥಿನಿ ಜಾರಿ ರಸ್ತೆಗೆ ಬಿದ್ದಿದ್ದಾಳೆ. ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕುವುದರಿಂದ ಸ್ವಲ್ಪದರಲ್ಲೇ ವಿದ್ಯಾರ್ಥಿನಿ ಪಾರಾಗಿದ್ದಾಳೆ.

- Advertisement -

Latest News

error: Content is protected !!