Sunday, June 7, 2026
Homeಕರಾವಳಿಮುಸ್ಲಿಂ ಬಾಲಕಿಗೆ ಹೃದಯದಾನ ಮಾಡಿದ ಹಿಂದೂ ಯುವಕನ ಕುಟುಂಬ : ಯುವಕನ ಕುಟುಂಬವನ್ನು ಭೇಟಿ ಮಾಡಿ...

ಮುಸ್ಲಿಂ ಬಾಲಕಿಗೆ ಹೃದಯದಾನ ಮಾಡಿದ ಹಿಂದೂ ಯುವಕನ ಕುಟುಂಬ : ಯುವಕನ ಕುಟುಂಬವನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸಿದ ಬಾಲಕಿ

- Advertisement -
- Advertisement -

ಕೇರಳ;ಧರ್ಮದ ಹೆಸರಲ್ಲಿ ದಿನಾ ಸಾವು ನೋವುಗಳಾಗುತ್ತಿದ್ದರಂತೆ ಮತ್ತೊಂದು ಕಡೆ ಸಾಮರಸ್ಯ ಬೆಸೆಯುವ ಘಟನೆಗಳು ಆಗುತ್ತಿರುವುದು ನಿಜಕ್ಕೂ ಕೊಂಚ ಸಮಾಧಾನಕಾರ ವಿಚಾರ. ಇಂತಹದ್ದೇ ಹೃದಯ ಮಿಡಿಯುವ ಕ್ಷಣಕ್ಕೆ ದೇವರ ನಾಡು ಕೇರಳ ಸಾಕ್ಷಿಯಾಗಿದೆ.

ಕೇರಳದ ಫಿನು ಶೇರಿನ್ ಎಂಬ  ಹೃದಯ ಸಂಬಂಧಿ ಕಾಯಿಲೆಯಿಂದ ಬಳುತ್ತಿದ್ದ ಮುಸ್ಲಿಂ ಬಾಲಕಿಗೆ  ಕೋಝಿಕೋಡ್ ನ ಮಾಯಾನಾಡ್ ನ ವಿಷ್ಣು ಎಂಬ ಯುವಕ ಹೃದಯವನ್ನು ಕಸಿ ಮಾಡಲಾಗಿತ್ತು. 2018ರಲ್ಲಿ ಅಪಘಾತವೊಂದರಲ್ಲಿ ವಿಷ್ಣು ಬ್ರೈನ್ ಡೆಡ್ ಆದ್ದರಿಂದ ಅವರ ಅಂಗಾಂಗವನ್ನು ಪೋಷಕರು ದಾನ ಮಾಡಿದ್ದರು. ಅದರಂತೆ ಯುವಕನ ಹೃದಯವನ್ನು ಬಾಲಕಿಗೆ ಕಸಿ ಮಾಡಲಾಗಿತ್ತು. ಇದು ಬಾಲಕಿಗೆ ಹೊಸ ಜೀವನ ಕಲ್ಪಿಸಿತ್ತು.

 ಇನ್ನು ಫಿನು ಶೆರಿನ್ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ  ಪಾಸ್ ಆಗಿದ್ದಾಳೆ. ಫಲಿತಾಂಶ ಪ್ರಕಟವಾದ ಬಳಿಕ ತಾನು ಬದುಕಿರಲು ಕಾರಣರಾದ ಕೋಝಿಕೋಡ್ ನ ಮಾಯಾನಾಡ್ ನಲ್ಲಿರುವ ದಿವಂಗತ ವಿಷ್ಣು ಅವರ ಕುಟುಂಬವನ್ನು ಭೇಟಿ ಮಾಡಿದ್ದಾಳೆ. ಪಿಯುಸಿ ಫಲಿತಾಂಶ ಬಂದ ತಕ್ಷಣ ವಿಷ್ಣು ಕುಟುಂಬಕ್ಕೆ ಧನ್ಯವಾದ ಅರ್ಪಿಸಲು ಪಿನು ತೆರಳಿದ್ದಾಳೆ. ಹೌದು‌ ಮುಸ್ಲಿಂ ಬಾಲಕಿ ಫಿನು ವಿಷ್ಣುವಿನ ಹೃದಯದ ಸಹಾಯದಿಂದ ಜೀವಿಸುತ್ತಿದ್ದಾಳೆ.

ವಿಷ್ಣುವಿನ ಅಂಗಾಂಗ ದಾನದಿಂದ ಫಿನು ಸೇರಿದಂತೆ ಆರು ಜೀವಗಳನ್ನು ಉಳಿಸಲು ಸಹಾಯವಾಗಿತ್ತು. ಚಕ್ಕಲಕ್ಕಲ್ ನಿವಾಸಿಯಾದ ಫಿನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎ+ ಅನ್ನು ಗಳಿಸಿದ್ದಾಳೆ. ವಿಷ್ಣುವಿನ ತಂದೆ ಸುನಿಲ್, ತಾಯಿ ಬೀನಾ ಮತ್ತು ಸಹೋದರಿ ಲಕ್ಷ್ಮಿ ಅವರು ಫಿನುವನ್ನು ಮನೆಗೆ ಬರಮಾಡಿಕೊಂಡಿದ್ದಾರೆ.

- Advertisement -

Latest News

error: Content is protected !!