Thursday, June 4, 2026
Homeತಾಜಾ ಸುದ್ದಿಸಿದ್ದರಾಮಯ್ಯ ಅವರಿಗೆ ಇದು ಕೊನೆಯ ಚುನಾವಣೆ:ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ

ಸಿದ್ದರಾಮಯ್ಯ ಅವರಿಗೆ ಇದು ಕೊನೆಯ ಚುನಾವಣೆ:ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ

- Advertisement -
- Advertisement -

ಬೆಂಗಳೂರು: ನಮ್ಮ ತಂದೆಯವರಿಗೆ ಇದು ಕೊನೆಯ ಚುನಾವಣೆಯಾಗಿದೆ. ವರುಣಾ ಕ್ಷೇತ್ರವನ್ನ ಬಿಟ್ಟು ಕೊಡಲು ಸಿದ್ಧನಿದ್ದೇನೆ. ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂಬುದಾಗಿ ಶಾಸಕ ಯತೀಂದ್ರ ಸಿದ್ಧರಾಮಯ್ಯ ಹೇಳಿದ್ದಾರೆ.

ವಯಸ್ಸಿನ ಸಮಸ್ಯೆ ಕಾರಣ ಬಾದಾಮಿ ಕ್ಷೇತ್ರಕ್ಕೆ ಹೋಗಿ ಬರುವುದು ಕಷ್ಟವಾಗಲಿದೆ. ಹಾಗಾಗಿ ಬೆಂಗಳೂರು ಸುತ್ತಮುತ್ತಲಿನ ಕ್ಷೇತ್ರವನ್ನ ಆರಿಸಿಕೊಳ್ಳಲು ಆಸಕ್ತಿ ಹೊಂದಿದ್ದಾರೆ. ಆದರೆ, ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಅಂತಿಮವಾಗಿಲ್ಲ. ಅವರಿಗೆ ರಾಜ್ಯದ ಎಲ್ಲಾ ಕ್ಷೇತ್ರಗಳ ಬಗ್ಗೆ ಸಂಪೂರ್ಣ ಅರಿವು ಇದೆ. ಅವರಿಗೆ ಯಾವ ಕ್ಷೇತ್ರ ಉತ್ತಮ ಅನ್ನೋದು ಚನ್ನಾಗಿ ಗೊತ್ತಿದೆ. ಈಗಾಗಲೇ ಐದು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ ಎಂದರು.

ಮನೆಯಲ್ಲಿ ತಂದೆಯವರ ಆಡಳಿತ ವೈಖರಿಯನ್ನ ನೋಡಿಕೊಂಡು ಬೆಳೆದವನು. ಅವರ ಪ್ರಾಮಾಣಿಕತೆ, ಬದ್ಧತೆ ನನಗೆ ಸ್ಫೂರ್ತಿಯಾಗಿದೆ. ಅವರು ಎಂದೂ ತತ್ವ, ಸಿದ್ದಾಂತದ ವಿಚಾರದಲ್ಲಿ ರಾಜಿಯಾದವರಲ್ಲ. ನಾನೀಗ ವರುಣಾ ಕ್ಷೇತ್ರದ ಶಾಸಕನಾಗಿದ್ದೇನೆ. ಅದೇ ಕಾರಣಕ್ಕೆ ವೃತ್ತಿಯಲ್ಲಿ ವೈದ್ಯನಾದರೂ ರಾಜಕೀಯಕ್ಕೆ ಆದ್ಯತೆ ನೀಡುತ್ತೇನೆ. ಈಗ ರಾಜಕೀಯ ಮಾಡುವುದು ಅಷ್ಟು ಸುಲಭವಲ್ಲ ಎಂದರು.

- Advertisement -

Latest News

error: Content is protected !!