Friday, June 5, 2026
Homeಕರಾವಳಿಸುಳ್ಯ : ಪಂಜದಲ್ಲಿ ಆಕಸ್ಮಿಕ ಬೆಂಕಿ ಅವಘಡ, ಹೊತ್ತಿ ಉರಿದ ಅಂಗಡಿಗಳು 

ಸುಳ್ಯ : ಪಂಜದಲ್ಲಿ ಆಕಸ್ಮಿಕ ಬೆಂಕಿ ಅವಘಡ, ಹೊತ್ತಿ ಉರಿದ ಅಂಗಡಿಗಳು 

- Advertisement -
- Advertisement -

ಸುಳ್ಯ : ಇಲ್ಲಿನ ಪಂಜದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಎರಡು ಅಂಗಡಿಗಳು ಹೊತ್ತಿ ಉರಿದ ಘಟನೆ ನಡೆದಿದೆ.

ಪಂಜ ಪೇಟೆಯಲ್ಲಿರುವ ರಮೇಶ್‌ ಪಾಲೋಳಿ ಅವರ ಕುಕ್ಕೆಶ್ರೀ ಹಾರ್ಡ್‌ ವೇರ್‌ ಮತ್ತು ಪಕ್ಕದಲ್ಲಿರುವ ನೂತನ್‌ ಅವರ ಮಾಲೀಕತ್ವದ ಕಟ್ಲೇರಿ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಂಪೂರ್ಣ ಹೊತ್ತಿ ಉರಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ರಾತ್ರಿ ಬೆಂಕಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿ, ಬೆಂಕಿ ನಂದಿಸಲು ಆರಂಭಿಸಿದ್ದಾರೆ. ಕೆಲ ಹೊತ್ತಿನಲ್ಲೇ ಅಗ್ನಿಶಾಮಕ ದಳದ ತಂಡದವರು ಸ್ಥಳಕ್ಕೆ ಆಗಮಿಸಿ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಈ ವೇಳೆಗಾಗಲೇ ಎರಡೂ ಅಂಗಡಿಗಳು ಸಂಪೂರ್ಣ ಉರಿದಿತ್ತು. ಕ್ಷಿಪ್ರ ಕಾರ್ಯಾಚರಣೆಯಿಂದ ಬೆಂಕಿ ಅಕ್ಕ-ಪಕ್ಕದ ಅಂಗಡಿಗಳಿಗೆ ಪಸರಿಸುವುದು ತಪ್ಪಿದೆ. ಅಗ್ನಿಶಾಮಕ ದಳದವರಿಗೆ ಊರವರು, ಸ್ಥಳೀಯರು ಸಹಕರಿಸಿದರು.

- Advertisement -

Latest News

error: Content is protected !!