Tuesday, June 9, 2026
Homeಕರಾವಳಿವಿಟ್ಲದಲ್ಲಿ ಬಾಕ್ಸೈಟ್ ಹೊತ್ತ ಲಾರಿ ಆಕ್ಟೀವಾಗೆ ಡಿಕ್ಕಿ; ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ ಪೋಲಿಸರ ವಶಕ್ಕೆ

ವಿಟ್ಲದಲ್ಲಿ ಬಾಕ್ಸೈಟ್ ಹೊತ್ತ ಲಾರಿ ಆಕ್ಟೀವಾಗೆ ಡಿಕ್ಕಿ; ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ ಪೋಲಿಸರ ವಶಕ್ಕೆ

- Advertisement -
- Advertisement -

ಬಾಕ್ಸೈಟ್ ಸಾಗಾಟ ದಂಧೆಯು ಮತ್ತೆ ಸದ್ದು ಮಾಡುತ್ತಿದ್ದು, ವಿಟ್ಲದಲ್ಲಿ ಬಾಕ್ಸೈಟ್ ಸಾಗಾಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿಟ್ಲ ಮಂಗಳೂರು ರಸ್ತೆಯ ಪಂಚಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಬಾಕ್ಸೈಟ್ ಸಾಗಾಟದ ಲಾರಿಯೊಂದು ಮಹಿಳೆ ಚಲಾಯಿಸುತ್ತಿದ್ದ ಆಕ್ಟೀವಾಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು, ಲಾರಿಯನ್ನು ಬೆನ್ನಟ್ಟಿ ಬೊಬ್ಬೆಕೇರಿ ಪೆಟ್ರೋಲ್ ಬಂಕ್ ಬಳಿ ತಡೆದು ಪೋಲಿಸರ ವಶಕ್ಕೆ ನೀಡಿದ್ದಾರೆ. ಆಕ್ಟೀವಾವು ಸಂಪೂರ್ಣ ಜಖಂಗೊಡಿದ್ದು, ಸವಾರ ಮಹಿಳೆಯ ಕೈಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!