- Advertisement -
- Advertisement -
ಚಂಡೀಗಢ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ದೂರನ್ನು ಹಿಂಪಡೆಯಬೇಕೆಂದರೆ 50 ಲಕ್ಷ ರೂಪಾಯಿ ಹಣ ಕೊಡಬೇಕಾಗಿ ಬೇಡಿಕೆಯಿಟ್ಟ ತಾಯಿ, ಮಗಳನ್ನು ಗುರುಗ್ರಾಮದ ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರ ವಿರುದ್ಧವಾಗಿ ನೀಡಿದ್ದ ದೂರನ್ನು ಹಿಂಪಡೆಯಬೇಕೆಂದರೆ 50 ಲಕ್ಷ ರೂಪಾಯಿ ಕೊಡಬೇಕೆಂದು ಯುವತಿ ಆರೋಪಿಗೆ ಬೇಡಿಕೆ ಇಟ್ಟಿದ್ದಳು. ಈ ಕುರಿತು ಆರೋಪಿಯ ಸಹೋದರ ಯುವತಿ ಹಾಗೂ ಆಕೆಯ ತಾಯಿಯ ವಿರುದ್ಧ ಸೆಕ್ಟರ್ 51ರಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಗುರುಗ್ರಾಮ್ ಪೊಲೀಸರು ಯುವತಿಯನ್ನು ಭಿವಾನಿಯಲ್ಲಿ ಬಂಧಿಸಿದ್ದು, ಆಕೆಯ ತಾಯಿಯನ್ನು ಗುರುಗ್ರಾಮದ ಸೆಕ್ಟರ್ 47ರಲ್ಲಿ ಬಂಧಿಸಿದ್ದಾರೆ ಎನ್ನುಲಾಗಿದೆ. ಇನ್ನೂ ತಾಯಿ ಹಾಗೂ ಮಗಳ ವಿರುದ್ಧ ಸುಳ್ಳು ಅತ್ಯಾಚಾರದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಪೋಲಿಸರು ವಿಚಾರಣೆಯ ಸಂದರ್ಭದಲ್ಲಿ ಯುವತಿಯ ತಾಯಿ ಬಳಿ ಇದ್ದ 1 ಲಕ್ಷ ರೂ. ಅನ್ನು ವಶಪಡಿಸಿಕೊಂಡಿದ್ದು, ಅತ್ಯಾಚಾರ ಪ್ರಕರಣದ ವಿರುದ್ಧ ದಾಖಲದ ದೂರನ್ನು ಹಿಂಪಡೆಯಬೇಕೆಂದರೆ ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ನಿಜ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕೊನೆಗೆ 30 ಲಕ್ಷ ರೂ.ಗೆ ಡೀಲ್ ಒಕೆ ಮಾಡಿಕೊಂಡಿದ್ದು, ಸ್ವಲ್ಪ ಹಣವನ್ನು ನೀಡಲು ಯುವತಿ ಮತ್ತು ಆಕೆಯ ತಾಯಿಗೆ ರೆಸ್ಟೋರೆಂಟ್‍ನಲ್ಲಿ ಭೇಟಿಯಾಗಲು ತಿಳಿಸಿದ್ದರು. ಹೀಗಾಗಿ ರೆಸ್ಟೋರೆಂಟ್‍ಗೆ ತಾಯಿ ಮಗಳು ಬಂದಿರುವ ವಿಚಾರ ತಿಳಿದ ಪೊಲೀಸರು ನಂತರ ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
- Advertisement -