Sunday, June 7, 2026
Homeತಾಜಾ ಸುದ್ದಿ40ರ ಮಹಿಳೆಯನ್ನು ವಿವಾಹವಾಗಲು ಹೊರಟ 70ರ ವೈದ್ಯ: ಕೋಟ್ಯಂತರ ರೂಪಾಯಿ ದೋಚಿ ಆಂಟಿ ಎಸ್ಕೇಪ್

40ರ ಮಹಿಳೆಯನ್ನು ವಿವಾಹವಾಗಲು ಹೊರಟ 70ರ ವೈದ್ಯ: ಕೋಟ್ಯಂತರ ರೂಪಾಯಿ ದೋಚಿ ಆಂಟಿ ಎಸ್ಕೇಪ್

- Advertisement -
- Advertisement -

ಲಕ್ನೋ: 70ರ ವಯಸ್ಸಿನಲ್ಲಿ  ಸುಂದರ ಮಹಿಳೆಯೊಬ್ಬಳನ್ಮು  ಮದುವೆಯಾಗುವ ಕನಸು ‌ಕಂಡ ವೈದ್ಯರೊಬ್ಬರು1 ಕೋಟಿ 80 ಲಕ್ಷ ಕಳೆದುಕೊಂಡ ಘಟನೆ ಲಕ್ನೋದಲ್ಲಿ ನಡೆದಿದೆ.

ಖ್ಯಾತ ಹೃದಯ ತಜ್ಞ ವೈದ್ಯರೊಬ್ಬರು ಪತ್ನಿಯ‌ ನಿಧನದ ಹಿನ್ನೆಲೆ ಏಕಾಂಗಿತನದಿಂದ ಹೊರ ಬರಲು ಎರಡನೇ ಮದುವೆಯಾಗೋದಕ್ಕೆ ಮುಂದಾಗಿದ್ದಾರೆ.

ಅದರಂತೆ ಜಾಹೀರಾತು ನೀಡಿದ್ದಾರೆ. ಅದನ್ನು‌ ನೋಡಿ ಕ್ರಿಶ(40) ಎಂಬಾಕೆ ವೈದ್ಯರನ್ನು ಮದುವೆಯಾಗೋದಾಗಿ ಹೇಳಿದ್ದಾಳೆ. ಅದರಂತೆ ಮಹಿಳೆಯನ್ನು ನಂಬಿದ ವೈದ್ಯರು ಬರೋಬ್ಬರಿ 1 ಕೋಟಿ 80 ಲಕ್ಷ ರೂಪಾಯಿ ಆಕೆಗೆ‌ ನೀಡಿದ್ದಾರೆ.

ದುಡ್ಡು ಕೈ ಸೇರುತ್ತಿದ್ದಂತೆ ಮಹಿಳೆ‌ ಪರಾರಿಯಾಗಿದ್ದಾಳೆ.
ಬಳಿಕ ವೈದ್ಯರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!