Saturday, June 6, 2026
Homeಕರಾವಳಿಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರ: ಕಾಲೇಜಿನಿಂದ ಟಿಸಿ ಪಡೆದ ಓರ್ವ ವಿದ್ಯಾರ್ಥಿನಿ

ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರ: ಕಾಲೇಜಿನಿಂದ ಟಿಸಿ ಪಡೆದ ಓರ್ವ ವಿದ್ಯಾರ್ಥಿನಿ

- Advertisement -
- Advertisement -

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಕಾಲೇಜಿನಿಂದ ಓರ್ವ ವಿದ್ಯಾರ್ಥಿನಿ ಟಿಸಿ ಪಡೆದಿದ್ದಾಳೆ.

ವಿವಿ ಘಟಕ ಕಾಲೇಜಿನಿಂದ ಹಿಜಾಬ್ ಸಮವಸ್ತ್ರದ ಭಾಗವಾಗಿರುವ ಕಾಲೇಜಿಗೆ ತೆರಳಲು ಮುಂದಾಗಿರುವ ವಿದ್ಯಾರ್ಥಿನಿ‌ ಟಿಸಿ ಪಡೆದಿದ್ದಾಳೆ. ಟಿಸಿ ಪಡೆಯಲು ನಿನ್ನೆ ಕಾಲೇಜಿಗೆ ವಿದ್ಯಾರ್ಥಿನಿ ಅರ್ಜಿ ಸಲ್ಲಿಸಿದ್ದಳು.

ಬೇರೆ ಕಾಲೇಜಿಗೆ ತೆರಳುವುದಿದ್ದರೆ ಟಿಸಿ ನೀಡಲು ವ್ಯವಸ್ಥೆ ಮಾಡುವುದಾಗಿ ಕಾಲೇಜು ಆಡಳಿತ ಮಂಡಳಿ ಹೇಳಿದ್ದ ಹಿನ್ನೆಲೆಯಲ್ಲಿ ಇಂದು ವಿದ್ಯಾರ್ಥಿನಿ ಟಿಸಿ ಪಡೆದು ತೆರಳಿದ್ದಾಳೆ. ಈ ಮಧ್ಯೆ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶಕ್ಕಾಗಿ ಪಟ್ಟು ಹಿಡಿದು 15 ವಿದ್ಯಾರ್ಥಿನಿಯರು ಕಾಲೇಜಿಗೆ ಗೈರಾಗಿದ್ದಾರೆ.

- Advertisement -

Latest News

error: Content is protected !!