Tuesday, June 9, 2026
Homeಅಪರಾಧಪತ್ನಿ ಮತ್ತು ಮಗಳನ್ನು ಚಾಕು ಇರಿದು ಕೊಲೆಗೈದ ವ್ಯಕ್ತಿ; ಪೊಲೀಸರಿಗೆ ಕರೆ ಮಾಡಿ ಸತ್ಯ ಹೇಳಿದ

ಪತ್ನಿ ಮತ್ತು ಮಗಳನ್ನು ಚಾಕು ಇರಿದು ಕೊಲೆಗೈದ ವ್ಯಕ್ತಿ; ಪೊಲೀಸರಿಗೆ ಕರೆ ಮಾಡಿ ಸತ್ಯ ಹೇಳಿದ

- Advertisement -
- Advertisement -

ಬೆಂಗಳೂರು: ಕೈತುಂಬಾ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೋರ್ವ ತನ್ನ ಹೆಂಡತಿಯ ಕೊಲೆ ಮಾಡಿ ಮಗಳಿಗೂ ಚಾಕು ಇರಿದಿರುವ ಘಟನೆ ನಡೆದಿದೆ.


ಬೆಂಗಳೂರಿನ ಮತ್ತಿಕೆರೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತಳನ್ನು 42 ವರ್ಷದ ಅನುಸೂಯ ಎಂದು ಗುರುತಿಸಲಾಗಿದೆ. ಮಗಳು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಕೊಲೆ ಮಾಡಿದ್ದ ಆರೋಪಿ ಧನೇಂದ್ರ ಬಳಿಕ ಪೊಲೀಸರಿಗೆ ಕರೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದುಬಂದಿದೆ.


ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಸಾಲಬಾಧೆಗೆ ಪತ್ನಿಯನ್ನ ಹತ್ಯೆ ಮಾಡಿರೋದಾಗಿ ಹೇಳಿದ್ದಾನಂತೆ.1.20 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದೆ. ಇದೇ ವಿಚಾರಕ್ಕೆ ರಾತ್ರಿಯೆಲ್ಲಾ ಗಲಾಟೆ ನಡೆದಿದೆ.ಬೆಳಗಿನ ಜಾವ ಮೂರು ಗಂಟೆಗೆ ವೇಳೆ ಪತ್ನಿಯನ್ನ ಹತ್ಯೆ ಮಾಡಿದ್ದಾನೆ.

- Advertisement -

Latest News

error: Content is protected !!