Saturday, June 6, 2026
Homeತಾಜಾ ಸುದ್ದಿಅಂಗನವಾಡಿಯಲ್ಲಿ ಗಂಜಿ ಬಸಿಯುವಾಗ ಬಿಸಿ ಗಂಜಿ ಬಿದ್ದು ಐವರು ಮಕ್ಕಳಿಗೆ ಗಾಯ

ಅಂಗನವಾಡಿಯಲ್ಲಿ ಗಂಜಿ ಬಸಿಯುವಾಗ ಬಿಸಿ ಗಂಜಿ ಬಿದ್ದು ಐವರು ಮಕ್ಕಳಿಗೆ ಗಾಯ

- Advertisement -
- Advertisement -

ರಾಯಚೂರು: ಅಂಗನವಾಡಿಯಲ್ಲಿ ಸಹಾಯಕಿ ಗಂಜಿ ಬಸಿಯೂವಾಗ ಬಿಸಿ ಗಂಜಿ ಬಿದ್ದು ಐವರು ಮಕ್ಕಳಿಗೆ ಗಾಯವಾಗಿರುವ ಘಟನೆ ರಾಯಚೂರಿನಲ್ಲಿ ‌ನಡೆದಿದೆ.

ಹಿಬಾ (3) , ಅರ್ಹಾನ್(3) ಮೊಹಮ್ಮದ್‌ ಜಾಹಿದ್‌(3), ಶೇಕ್‌ ಅದ್ನಾನ್‌(4), ಬಿಬಿ ಮರಿಯಂ (3) ಗಾಯಗೊಂಡ ಮಕ್ಕಳು.‌ ಗಾಯಗೊಂಡ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಂಗನವಾಡಿ ಸಹಾಯಕಿ ಲಕ್ಷ್ಮಿ ಗಂಜಿ ಬಸಿಯುತ್ತಿದ್ದ ವೇಳೆ ಅಲ್ಲೆ ಆಟವಾಡುತ್ತಿದ್ದ ಮಕ್ಕಳು ಓಡಿ ಬಂದು ಲಕ್ಷ್ಮಿ ಗೆ ಡಿಕ್ಕಿ ಹೊಡೆದ ಪರಿಣಾಮ ಲಕ್ಷ್ಮಿ ಕೈನಲ್ಲಿದ್ದ ಅನ್ನದ ಪಾತ್ರೆ ಜಾರಿ ಬಿದ್ದು ಗಂಜಿ ಚೆಲ್ಲಿ ಘಟನೆ ನಡೆದಿದೆ. ಈ‌ ಕುರಿತು ಹೆಚ್ಚಿನ ಮಾಹಿತಿ‌ ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!