Thursday, June 4, 2026
Homeಕರಾವಳಿಬಂಟ್ವಾಳ: ಪೆರ್ನೆಯಲ್ಲಿ ಆಕ್ಟಿವಾಗೆ ಡಿಕ್ಕಿ ಹೊಡೆದ ಟಿಪ್ಪರ್, ಮಹಿಳೆ ಸಾವು

ಬಂಟ್ವಾಳ: ಪೆರ್ನೆಯಲ್ಲಿ ಆಕ್ಟಿವಾಗೆ ಡಿಕ್ಕಿ ಹೊಡೆದ ಟಿಪ್ಪರ್, ಮಹಿಳೆ ಸಾವು

- Advertisement -
- Advertisement -

ಬಂಟ್ವಾಳ: ಆಕ್ಟಿವಾಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪೆರ್ನೆ ಸಮೀಪ ಅಮೈ ಎಂಬಲ್ಲಿ ನಡೆದಿದೆ. ನೆಕ್ಕಿಲಾಡಿ ಬಾಲಕೃಷ್ಣ ಭಟ್ ಎಂಬವರ ಪತ್ನಿ ಪೂರ್ಣಿಮಾ(45) ಮೃತ ದುರ್ದೈವಿ. ಅಪಘಾತವಾಗುತ್ತಿದ್ದಂತೆ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ,

ಬಾಲಕೃಷ್ಣ ಭಟ್ ಹಾಗೂ ಪತ್ನಿ ಪೂರ್ಣಿಮಾ ಆಕ್ಟಿವಾದಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಪೂರ್ಣಿಮಾ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಡಿಕ್ಕಿ ಹೊಡೆಯುತ್ತಿದ್ದಂತೆ ಚಾಲಕ ಪರಾರಿಯಾಗಿದ್ದು, ಪೂರ್ಣಿಮಾ ಅವರ ಪತಿ ಬಾಲಕೃಷ್ಣ ಭಟ್ ಅವರಿಗೂ ಗಾಯಗಳಾಗಿದ್ದು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Latest News

error: Content is protected !!