Wednesday, June 3, 2026
Homeತಾಜಾ ಸುದ್ದಿಪುತ್ತೂರು: ರಾಜ್ಯಮಟ್ಟದ ಚೆಸ್ ಪಂದ್ಯಾಕೂಟ ಜೂನ್ 24 ರಿಂದ ಆರಂಭ

ಪುತ್ತೂರು: ರಾಜ್ಯಮಟ್ಟದ ಚೆಸ್ ಪಂದ್ಯಾಕೂಟ ಜೂನ್ 24 ರಿಂದ ಆರಂಭ

- Advertisement -
- Advertisement -

ಪುತ್ತೂರು: ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ 17 ವರ್ಷದೊಳಗಿನವರ ರಾಜ್ಯಮಟ್ಟದ ಚೆಸ್‌ ಚಾಂಪಿಯನ್‌ ಶಿಪ್ ನಡೆಯಲಿದೆ. ಜೂನ್‌ 24 ರಿಂದ ಮೂರು ದಿನಗಳವರೆಗೆ ಪಂದ್ಯಾಕೂಟ ನಡೆಯಲಿದೆ ಎಂದು ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ಉಮಾ.ಡಿ.ಪ್ರಸನ್ನ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಚೆಸ್‌ ಚಾಂಪಿಯನ್‌ ಷಿಪ್‌ ನಡೆಯುತ್ತಿದೆ. ನಮ್ಮಲ್ಲಿ ಬಹಳಷ್ಟು ಚೆಸ್‌ ಪ್ರತಿಭೆಗಳಿದ್ದಾರೆ. ಆದ್ರೆ ಅವರೆಲ್ಲಾ ಎಲೆಮರೆಯ ಕಾಯಿಯಂತಾಗಿದ್ದಾರೆ. ಈ ಸ್ಪರ್ಧಾಕೂಟದಿಂದ ಸಾಕಷ್ಟು ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶ ಸಿಕ್ಕಂತಾಗುತ್ತೆ ಎಂದರು.

ಅಂತರಾಷ್ಟ್ರೀಯ ಚೆಸ್ ನಿರ್ಣಾಯಕರ ಮಾರ್ಗದರ್ಶನದಲ್ಲಿ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧಾಳುಗಳಿಗೆ 750 ರೂಪಾಯಿಗಳ ಎಂಟ್ರಿ ಫೀಸ್ ನಿಗಧಿಪಡಿಸಲಾಗಿದೆ. ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸ್ಪರ್ಧೆ ನಡೆಯಲಿದೆ. 200 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದರು.

- Advertisement -

Latest News

error: Content is protected !!