Wednesday, May 15, 2024
Homeತಾಜಾ ಸುದ್ದಿಮಂಗಳೂರು ವಿವಿ ಪರೀಕ್ಷೆಯ ಫಲಿತಾಂಶಕ್ಕೆ ವಿಘ್ನ: ವಿದ್ಯಾರ್ಥಿಗಳ ಫಲಿತಾಂಶ ಮತ್ತಷ್ಟು ವಿಳಂಬ ಸಾಧ್ಯತೆ

ಮಂಗಳೂರು ವಿವಿ ಪರೀಕ್ಷೆಯ ಫಲಿತಾಂಶಕ್ಕೆ ವಿಘ್ನ: ವಿದ್ಯಾರ್ಥಿಗಳ ಫಲಿತಾಂಶ ಮತ್ತಷ್ಟು ವಿಳಂಬ ಸಾಧ್ಯತೆ

spot_img
- Advertisement -
- Advertisement -

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕಾರ್ಯಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ಅತಿಥಿ ಉಪನ್ಯಾಸಕರು ಪೂರ್ಣ ರೂಪದಲ್ಲಿ ಮೌಲ್ಯಮಾಪನ ಕಾರ್ಯಕ್ಕೆ ಇಳಿಯುತ್ತಿಲ್ಲ. ಪರಿಣಾಮ ಹದಿನೈದು ದಿನಗಳಲ್ಲಿ ಬರಬೇಕಾದ ಫಲಿತಾಂಶ ಒಂದು ತಿಂಗಳು ದಾಟುವ ಸಾಧ್ಯತೆಯಿದೆ.

ಜೂ.13ರಂದು ಮಂಗಳೂರು ವಿವಿಗೆ ಸಂಬಂಧಪಟ್ಟಂತೆ ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎ ಪದವಿಗಳ ಮೌಲ್ಯಮಾಪನ ಕಾರ‍್ಯ ಆರಂಭವಾಗಿದೆ. ಇದರ ಜತೆಯಲ್ಲಿ ಮೇ 13ರಿಂದ 2,4,6 ಸೆಮಿಸ್ಟರ್‌ನ ಪದವಿ ತರಗತಿಗಳು ಕೂಡ ಸಾಗುತ್ತಿದೆ. ಇದರ ನಡುವೆ ಮೌಲ್ಯಮಾಪನ ಕಾರ‍್ಯ ಕೂಡ ಜತೆಗೂಡಿದೆ. ವಿಶೇಷ ಎಂದರೆ ಈ ಬಾರಿ ಮೌಲ್ಯಮಾಪನ ವಿಚಾರದಲ್ಲಿ ಅತಿಥಿ ಉಪನ್ಯಾಸಕರ ಬಳಕೆಯ ವಿಚಾರದಲ್ಲಿ ಮೂಡಿರುವ ಗೊಂದಲಕ್ಕೆ ಪೂರ್ಣ ರೂಪದ ಪರಿಹಾರ ಸಿಕ್ಕಿಲ್ಲ. ಇದರ ಪರಿಣಾಮ ಮೌಲ್ಯ ಮಾಪನ ಕಾರ್ಯ ಆರಂಭದಲ್ಲಿಯೇ ಕುಂಟುತ್ತಾ ಸಾಗುತ್ತಿದೆ

ಮಂಗಳೂರು ವಿವಿಯ ಮೌಲ್ಯ ಮಾಪನದ ಶೇ.60ರಷ್ಟು ಅತಿಥಿ ಉಪನ್ಯಾಸಕರಿಂದ ನಡೆಯುತ್ತಿದೆ. ಉಳಿದಂತೆ ಶೇ.40ರಷ್ಟು ಕಾಯಂ ಉಪನ್ಯಾಸಕರಿಂದ ಸಾಗಬೇಕು. ಶೇ.40ರಲ್ಲಿ ಹೆಚ್ಚಿನವರು ಪ್ರಿನ್ಸಿಪಾಲರು, ವಿಭಾಗದ ಉಸ್ತುವಾರಿಗಳು ಆಗಿದ್ದಾರೆ. ಇದರಿಂದ ಮೌಲ್ಯಮಾಪನ ಮುಗಿಸುವ ಮಹತ್ತರ ಹೊಣೆಗಾರಿಕೆ ಅತಿಥಿ ಉಪನ್ಯಾಸಕರಿಗೆ ಸಿಕ್ಕಿದೆ. ಆದರೆ ಕಾಲೇಜು ಶಿಕ್ಷಣ ಇಲಾಖೆ ಹೇಳುವಂತೆ ಅತಿಥಿ ಉಪನ್ಯಾಸಕರು ತರಗತಿ ಅಥವಾ ಮೌಲ್ಯಮಾಪನ ಎರಡಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಒಂದರಲ್ಲಿ ಹೋದರೆ ಮತ್ತೊಂದರಲ್ಲಿ ಸ್ಯಾಲರಿ ಕಡಿತ ಮಾಡಲಾಗುತ್ತದೆ. ಉಪನ್ಯಾಸಕರ ಅವಧಿಯಲ್ಲಿ ತರಗತಿಯಲ್ಲಿ ಬೋಧನೆ ನಡೆಸಬೇಕು ಅಲ್ಲಿಯೇ ವೇತನ ಪಡೆಯಬೇಕು. ಮೌಲ್ಯಮಾಪನಕ್ಕೆ ಹೋದರೆ ತರಗತಿಯ ವೇತನ ಇಲ್ಲ. ಬರೀ ಮೌಲ್ಯಮಾಪನದ ಮೊತ್ತವನ್ನು ಪಡೆಯುವ ಅವಕಾಶ ಸಿಗುತ್ತದೆ ಎನ್ನುವ ವಿಚಾರದಿಂದ ಅತಿಥಿ ಉಪನ್ಯಾಸಕರು ಈ ಬಾರಿ ತರಗತಿಗಳಿಗೆ ಆದ್ಯತೆ ಕೊಡುತ್ತಿದ್ದಾರೆ. ಮೌಲ್ಯಮಾಪನ ಕೆಲಸಕ್ಕೆ ಹೆಚ್ಚು ಮುತುವರ್ಜಿ ತೋರಿಸದೇ ಇರುವುದು ಈ ಬಾರಿ ಮೌಲ್ಯಮಾಪನ ಕೆಲಸಕ್ಕೆ ಬಹಳ ದೊಡ್ಡ ಹೊಡೆತ ಬೀಳುತ್ತಿದೆ.



.

- Advertisement -
spot_img

Latest News

error: Content is protected !!