Friday, June 5, 2026
Homeಉತ್ತರ ಕನ್ನಡಅಪಘಾತವಾಗಿ ರಾತ್ರಿ ರಸ್ತೆಯಲ್ಲೇ ಬಿದ್ದಿದ್ದ ಯುವಕ: ರಾತ್ರಿಯಿಡೀ ನರಳಾಡಿ ಪ್ರಾಣಬಿಟ್ಟ ಬೈಕ್ ಸವಾರ

ಅಪಘಾತವಾಗಿ ರಾತ್ರಿ ರಸ್ತೆಯಲ್ಲೇ ಬಿದ್ದಿದ್ದ ಯುವಕ: ರಾತ್ರಿಯಿಡೀ ನರಳಾಡಿ ಪ್ರಾಣಬಿಟ್ಟ ಬೈಕ್ ಸವಾರ

- Advertisement -
- Advertisement -

ಭಟ್ಕಳ: ಬೈಕ್‌ ಸ್ಕಿಡ್ ಆಗಿ ತೀವ್ರ ರಕ್ತಸ್ರಾವದಿಂದ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಮುರ್ಡೇಶ್ವರದಲ್ಲಿ ನಡೆದಿದೆ. ಗುಮ್ಮನಹಕ್ಕಲ ನಿವಾಸಿ ಹೋಟೆಲ್ ಉದ್ಯಮಿ ದಿನೇಶ ಈರಪ್ಪ ನಾಯ್ಕ ಮೃತ ಯುವಕ‌.

ದಿನೇಶ್ ಬೈಕಿನಲ್ಲಿ ಮುರ್ಡೇಶ್ವರದಿಂದ ಗುಮ್ಮನಹಕ್ಕಲಿನಲ್ಲಿರುವ ತನ್ನ ಮನೆಗೆ ಹೋಗುವಾಗ ಬೈಕ್‌ ಸ್ಕಿಡ್‌ ಆಗಿ ತಲೆಗೆ ತೀವ್ರ ಗಾಯಗಳಾಗಿತ್ತು. ತಡರಾತ್ರಿಯಾದ ಕಾರಣ ಆ ದಾರಿಯಲ್ಲಿ ಯಾರೂ ಬಾರದ ಕಾರಣ ರಕ್ತಸ್ರಾವವಾಗಿ ಯುವಕ ಅಲ್ಲೇ ಸಾವನ್ನಪ್ಪಿದ್ದಾನೆ.

ಇಂದು ಬೆಳಗ್ಗೆ 7 ಗಂಟೆಯ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದವರು, ದಿನೇಶ್‌ ನನ್ನು ನೋಡಿ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ.ಆದರೆ ಯುವಕ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.

- Advertisement -

Latest News

error: Content is protected !!