- Advertisement -
![]()
- Advertisement -
ಪುತ್ತೂರು: ನೆಹರುನಗರ ಕಾಲೇಜು ವಿದ್ಯಾರ್ಥಿಗೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಬುಡೋಳಿ ಉಮ್ಮರ್ ಎಂಬವರ ಪುತ್ರ ವಿವೇಕಾನಂದ ಅಂತಿಮ ಡಿಪ್ಲೋಮಾ ವಿದ್ಯಾರ್ಥಿ ಮೊಹಮ್ಮದ್ ಫೈಝಲ್ ಉಮ್ಮರ್ ಹಲ್ಲೆಗೊಳಗಾದವರು.
‘ತಾನು ತಂದೆಯ ಕಾರಿನಲ್ಲಿ ಸಹಪಾಠಿ ಜೊತೆ ಕಾಲೇಜಿನಿಂದ ಹಿಂತಿರುಗುತ್ತಿದ್ದ ವೇಳೆ ನೆಹರೂನಗರ ಜಂಕ್ಷನ್ ನಲ್ಲಿ ಅಪರಿಚಿತ ಎಂಟು ಮಂದಿ ಯುವಕರ ತಂಡ ಹಲ್ಲೆ ನಡೆಸಿದೆ’ ಎಂದು ಆರೋಪಿಸಿ ಯುವಕ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -


