Friday, June 5, 2026
Homeಕರಾವಳಿಸುಳ್ಯದಲ್ಲಿ ಯುವಕನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ ಪ್ರಕರಣ: ನಾಡ ಪಿಸ್ತೂಲು ಸಹಿತ ಮೂವರು...

ಸುಳ್ಯದಲ್ಲಿ ಯುವಕನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ ಪ್ರಕರಣ: ನಾಡ ಪಿಸ್ತೂಲು ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಸುಳ್ಯ: ಇಲ್ಲಿನ ಮೊಗರ್ಪಣೆ ಸೇತುವೆ ಬಳಿ ಸುಳ್ಯದ ಜಯನಗರ ನಿವಾಸಿ ಮಹಮ್ಮದ್ ಶಾಹಿ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರು ಆರೋಪಿಗಳನ್ನು ಕೃತ್ಯಕ್ಕೆ ಬಳಸಿದ ನಾಡ ಪಿಸ್ತೂಲ್ ಸಹಿತ ಬಂಧಿಸಿದ್ದಾರೆ.

ಕೆ ಜಯನ್ (38), ವಿನೋದ್ ಆರ್ (34), ಹೆಚ್.ಎಸ್. ಮನೋಜ್ (25) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ನಾಡ ಪಿಸ್ತೂಲ್ ಜೊತೆಗೆ 2 ಜೀವಂತ ಗುಂಡುಗಳು ಹಾಗೂ ಸ್ಕಾರ್ಫಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!