Thursday, June 4, 2026
Homeತಾಜಾ ಸುದ್ದಿಸ್ವಯಂ ವಿವಾಹಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ: ನಿಗಧಿತ ದಿನಾಂಕಕ್ಕೂ ಮೊದಲೇ ವಿವಾಹವಾದ ಕ್ಷಮಾ ಬಿಂದು

ಸ್ವಯಂ ವಿವಾಹಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ: ನಿಗಧಿತ ದಿನಾಂಕಕ್ಕೂ ಮೊದಲೇ ವಿವಾಹವಾದ ಕ್ಷಮಾ ಬಿಂದು

- Advertisement -
- Advertisement -

ವಡೋದರಾ: ಕಳೆದ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿರುವ ಗುಜರಾತ್ ನ ಕ್ಷಮಾ ಬಿಂದು ಮದುವೆ ನಡೆದಿದೆ. ವಡೋದರಾದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ ವಿವಾಹವಾಗಿದ್ದಾಳೆ. ಇದು ಭಾರತದ ಪ್ರಥಮ ಸ್ವಯಂ ವಿವಾಹ ಪ್ರಕರಣವಾಗಿದೆ

ಬಿಜೆಪಿ ನಾಯಕಿಯೊಬ್ಬರು ಆಕೆಯ ಮದುವೆಯನ್ನು ವಿರೋಧಿಸಿದ ನಂತರ ಮತ್ತು ದೇವಸ್ಥಾನದಲ್ಲಿ ಮದುವೆಯಾಗಲು ಅನುಮತಿಸುವುದಿಲ್ಲ ಎಂದು ಹೇಳಿದ ಕಾರಣದಿಂದ ಅನಗತ್ಯ ವಿವಾದವನ್ನು ತಪ್ಪಿಸಲು ಕ್ಷಮಾ ಬಿಂದು ನಿಗದಿತ ದಿನಾಂಕಕ್ಕಿಂತ ಕೆಲವು ದಿನಗಳ ಮುಂಚಿತವಾಗಿ ವಿವಾಹವಾದರು. ಈ ಮೊದಲು ಜೂನ್ 11ರಂದು ಮದುವೆಯಾಗಲು ನಿಶ್ಚಯಿಸಿದ್ದರು.

ವಿವಾಹದ ನಂತರ ವೀಡಿಯೊದಲ್ಲಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞರಾಗಿರುತ್ತೇನೆ ಎಂದು ಹೇಳಿದರು. “ನನಗೆ ಸಂದೇಶ ಕಳುಹಿಸಿದ ಮತ್ತು ನನ್ನನ್ನು ಅಭಿನಂದಿಸಿದ ಮತ್ತು ನಾನು ನಂಬಿದ್ದಕ್ಕಾಗಿ ಹೋರಾಡುವ ಶಕ್ತಿಯನ್ನು ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಅವರು ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.

ಕ್ಷಮಾ ಬಿಂದು ಅವರು ಸಂಪ್ರದಾಯಗಳನ್ನು ಪಾಲಿಸಿಯೇ ಸ್ವಯಂ ವಿವಾಹವಾದರು. ಹಳದಿ ಕಾರ್ಯಕ್ರಮ, ಮೆಹಂದಿ ಕಾರ್ಯಕ್ರಮಗಳೂ ನಡೆದಿದ್ದವು. ವಿವಾಹದ ಬಳಿಕ ಹನಿಮೂನ್ ಗೆ ಎರಡು ವಾರಗಳ ಕಾಲ ಗೋವಾಗೆ ಹೋಗುವುದಾಗಿ ಕ್ಷಮಾ ಬಿಂದು ಹೇಳಿದ್ದರು.

- Advertisement -

Latest News

error: Content is protected !!