Thursday, June 4, 2026
Homeಅಪರಾಧವಿಟ್ಲ: ಸಿಬ್ಬಂದಿಗಳಿಗೆ ಸಂಬಳ ಕೊಡದೆ ವಂಚಿಸಿದ ಕಲ್ಲು ಕೋರೆ ಮಾಲೀಕ – ಪ್ರಕರಣ ದಾಖಲು

ವಿಟ್ಲ: ಸಿಬ್ಬಂದಿಗಳಿಗೆ ಸಂಬಳ ಕೊಡದೆ ವಂಚಿಸಿದ ಕಲ್ಲು ಕೋರೆ ಮಾಲೀಕ – ಪ್ರಕರಣ ದಾಖಲು

- Advertisement -
- Advertisement -

ವಿಟ್ಲ: ಕೋರೆಯ ಮಾಲೀಕ ತನ್ನ ಸಿಬ್ಬಂದಿಗಳಿಗೆ ಸಂಬಳ ಕೊಡದೆ ವಂಚನೆ ಮಾಡಿದ ಆರೋಪ ಕೇಳಿಬಂದಿದ್ದು ಕೋರೆಯ ಸಿಬ್ಬಂದಿಗಳು ಪೊಲೀಸ್ ಠಾಣಾ ಮೆಟ್ಟಿಲೇರಿದ ಘಟನೆ ನಡೆದಿದೆ. ವಿಟ್ಲದ ವೀರಕಂಭದ ಶ್ರೀ ಪೊಳಲಿ ಕಲ್ಲು ಕೋರೆಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://mahaxpr


ಸುಮಾರು 34 ಕ್ಕೂ ಅಧಿಕ ಸಿಬ್ಬಂದಿಗಳಿಗೆ ಸಂಬಳ ನೀಡಿಲ್ಲ. ಈ ಹಿನ್ನಲೆ ಸಿಬ್ಬಂದಿಗಳು ಕೋರೆ ಮಾಲೀಕ ಪ್ರೇಮ್ ಗೌಡ ಹಾಗೂ ಮ್ಯಾನೇಜರ್‍ ದೀಕ್ಷಿತ್ ವಿರುದ್ಧ ದೂರು ನೀಡಿದ್ದಾರೆ.


ಈ ಕೋರೆಯಲ್ಲಿ ಕಳೆದ 10 ತಿಂಗಳುಗಳಿಂದ ಕೆಲಸ ಮಾಡಿದ್ದೇವೆ. ಆದರೆ ಈಗ ಕೆಲಸ ಮುಗಿದ ಬಳಿಕ ನಮಗೆ ಸಂಬಳ ಕೊಡದೆ ವಂಚನೆ ಮಾಡಿದ್ದಾರೆ. ನಾವು ಬೇರೆ ರಾಜ್ಯದ ಸಿವಾಸಿಗಳಾದ ಕಾರಣ ಈಗ ಊಟಕ್ಕೂ ಗತಿ ಇಲ್ಲದೆ ನಿರ್ಗತಿಕರಾಗಿದ್ದೇವೆ. ಹೆಂಡಿ ಮತ್ತು ಸಣ್ಣ ಸಣ್ಣ ಮಕ್ಕಳು ಆಹಾರವಿಲ್ಲದೆ ತುಂಬಾ ತೊಂದರೆಯಲ್ಲಿದ್ದೇವೆ. ಮಾಲಕರನ್ನು ಕರೆಸಿ ನಮ್ಮ ಬಾಕಿ ಸಂಬಳವನ್ನು ಕೂಡಲೇ ತೆಗೆಸಿಕೊಡಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

Latest News

error: Content is protected !!