Friday, June 5, 2026
Homeತಾಜಾ ಸುದ್ದಿಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ಐವರು ಬಲಿ

ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ಐವರು ಬಲಿ

- Advertisement -
- Advertisement -

ಮುಂಬೈ; ನಿಂತಿದ್ದ ಕಂಟೈನರ್ ಟ್ರಕ್‍ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮಕ್ಕಳು ಸೇರಿ ಐವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ರಿಂಜಯ್ ಶಿರೋಟೆ (35), ಮತ್ತು ಅವರ ಸಂಬಂಧಿಕರಾದ ಸ್ಮಿತಾ ಶಿರೋಟೆ (38) ಪೂರ್ವ ಶಿರೋಟೆ (14), ಸುನೇಶಾ ಶಿರೋಟೆ (10) ಮತ್ತು ವೀರು ಶಿರೋಟೆ (4) ಎಂದು ಗುರುತಿಸಲಾಗಿದೆ.

ಕಾರು ಪುಣೆಯಿಂದ ಕೊಲ್ಲಾಪುರದ ಜಯಸಿಂಗ್ಪುರಕ್ಕೆ ಹೋಗುತ್ತಿದ್ದಾಗ ಸಾಂಗ್ಲಿಯ ಕಾಸೆಗಾಂವ್ ಪ್ರದೇಶದ ಯೆವಲೆವಾಡಿ ಫಾಟಾ ಪ್ರದೇಶದ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ವೇಗದಲ್ಲಿ ಚಲಿಸುತ್ತಿದ್ದು, ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ, ಅದರಲ್ಲಿದ್ದ ಎಲ್ಲಾ ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕಾಸೆಗಾಂವ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

Latest News

error: Content is protected !!