Thursday, June 4, 2026
Homeಕರಾವಳಿಮಂಗಳೂರು: ಮಂಗಳೂರು ವಿವಿ ಕಾಲೇಜು ಹಿಜಾಬ್ ವಿವಾದ ವಿಚಾರ: ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಎರಡು ದಿನ...

ಮಂಗಳೂರು: ಮಂಗಳೂರು ವಿವಿ ಕಾಲೇಜು ಹಿಜಾಬ್ ವಿವಾದ ವಿಚಾರ: ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಎರಡು ದಿನ ಗಡುವು ನೀಡಿದ ಮಂಗಳೂರು ವಿವಿ ಸಮನ್ವಯ ಸಮಿತಿ

- Advertisement -
- Advertisement -

ಮಂಗಳೂರು: ಮಂಗಳೂರು ವಿವಿ ಕಾಲೇಜು ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳೂರು ವಿವಿ ಸಮನ್ವಯ ಸಮಿತಿ ಅಧ್ಯಕ್ಷ ರಿಯಾಜ್ ಹೇಳಿಕೆ ನೀಡಿದ್ದಾರೆ.ನಾವು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಎರಡು ದಿನದ ಗಡುವು ಕೊಡ್ತೇವೆ. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಬೃಹತ್ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.

ಮಂಗಳೂರಿನಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಸರ್ಕಾರಿ ಪ್ರೇರಿತ. ಪಠ್ಯ ಪುಸ್ತಕ ವಿವಾದ ಬದಲಿಸಲು ಹಿಜಾವ್ ವಿವಾದ ತರಲಾಗಿದೆ.ಅವರದ್ದೇ ಎಬಿವಿಪಿ ಸಂಘಟನೆ ಕಾಲೇಜಿನಲ್ಲಿ ಗಲಭೆಗೆ ಯತ್ನಿಸ್ತಿದೆ.ಹೈ ಕೋರ್ಟ್ ತೀರ್ಪು ಬಂದ ಬಳಿಕ ಎರಡು ತಿಂಗಳು ಈ ಸಮಸ್ಯೆ ಇರಲಿಲ್ಲ.ಆದರೆ ಎಬಿವಿಪಿ ಒತ್ತಡದಿಂದ ಈ ವಿವಾದ ಸೃಷ್ಟಿ ಮಾಡಲಾಗಿದೆ.ಇದನ್ನ ಮಂಗಳೂರು ವಿವಿ ಸಮನ್ವಯ ಸಮಿತಿ ಖಂಡಿಸುತ್ತದೆ.ನಮ್ಮ ಸಮನ್ವಯ ಸಮಿತಿ ನಾಲ್ಕು ತಿಂಗಳಿನಿಂದ ವಿವಿ ಕಾಲೇಜಿನಲ್ಲಿ ಇದೆ. ಹೀಗಾಗಿ ಮುಸ್ಲಿಂ ಧರ್ಮದ ಮುಖಂಡರು, ನಾಯಕರು ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಲ್ಲಬೇಕು ಎಂದಿದ್ದಾರೆ.

ಅಲ್ಲದೇ ಉಪ್ಪಿನಂಗಡಿ ಕಾಲೇಜಿನ ಅಮಾನತಾದ ವಿದ್ಯಾರ್ಥಿನಿಯರು ಸಂಪರ್ಕಿಸಿದ್ರೆ ತಾವು ಬೆಂಬಲ ನೀಡೋದಾಗಿ ಹೇಳಿದ್ದಾರೆ,

- Advertisement -

Latest News

error: Content is protected !!