Friday, June 5, 2026
Homeಕರಾವಳಿಬಂಟ್ವಾಳ: ನೇತ್ರಾವತಿ ಹಳೆ ಸೇತುವೆಯಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ನೇತ್ರಾವತಿ ಹಳೆ ಸೇತುವೆಯಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಬಂಟ್ವಾಳ: ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಣೆಮಂಗಳೂರು ಸಮೀಪದ ಗೂಡಿನಬಳಿಯಲ್ಲಿ ನೇತ್ರಾವತಿ ಹಳೆ ಸೇತುವೆಯಲ್ಲಿ ನಡೆದಿದೆ.

 ನರಿಕೊಂಬು ಗ್ರಾಮದ ನಾಟಿ ನಿವಾಸಿ ಮೋನಪ್ಪ(65) ಆತ್ಮಹತ್ಯೆ ಮಾಡಿಕೊಂಡವರು. ಅವರು ನರಿಕೊಂಬು ಗ್ರಾ.ಪಂ.ನಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಪಂಪ್‌ ಆಪರೇಟರ್‌ ಆಗಿದ್ದು, ಇಂದು  ಬೆಳಗ್ಗೆ ಅವರು ನೀರಿಗೆ ಹಾರಿರುವುದನ್ನು ಕಂಡ ಸ್ಥಳೀಯ ಈಜುಗಾರರಾದ ಸಿದ್ದೀಕ್‌ ಎಂ.ಕೆ, ತಂಶೀರ್‌, ಸತ್ಯ, ಇಜ್ಜು ರಿಝ್ವಾನ್‌, ಅಮೀನ್‌, ಇನಾಯತ್‌, ಇಸ್ಮಾಯಿಲ್‌ ಅರಬಿ ಅವರು ತತ್‌ಕ್ಷಣ ನೀರಿಗೆ ಹಾರಿ ಅವರ ರಕ್ಷಣೆಗೆ ಮುಂದಾಗಿದ್ದು, ಆದರೆ ಅದಾಗಲೇ ಅವರು ಮೃತಪಟ್ಟಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!