Monday, June 8, 2026
Homeತಾಜಾ ಸುದ್ದಿಬಾಲಿವುಡ್ ನ ಖ್ಯಾತ ಸಿಂಗರ್ ಕೃಷ್ಣಕುಮಾರ್ ಕುನ್ನಾಥ್ (ಕೆಕೆ) ಇನ್ನಿಲ್ಲ

ಬಾಲಿವುಡ್ ನ ಖ್ಯಾತ ಸಿಂಗರ್ ಕೃಷ್ಣಕುಮಾರ್ ಕುನ್ನಾಥ್ (ಕೆಕೆ) ಇನ್ನಿಲ್ಲ

- Advertisement -
- Advertisement -

ಕೋಲ್ಕತಾ : ಬಾಲಿವುಡ್ ನಲ್ಲಿ ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನಾಥ್ ಅವರು ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಅಸ್ವಸ್ಥಗೊಂಡಿದ್ದ ಅವರನ್ನು ನಗರದ ಸಿಎಂಆರ್ ಐ ಆಸ್ಪತ್ರೆಗೆ ಕರೆತರುತ್ತಿದ್ದಾಗಲೇ ಮೃತಪಟ್ಟಿದ್ದಾರೆ.

ಕೆಕೆ ಎಂದು ಹೆಚ್ಚು ಪರಿಚಿತರಾಗಿದ್ದ ಕೃಷ್ಣಕುಮಾರ್ ಕುನ್ನಾಥ್ ಅವರಿಗೆ 53 ವರ್ಷ ವಯಸ್ಸಾಗಿತ್ತು. ಮೂರು ದಶಕಗಳ ಕಾಲ ತಮ್ಮ ಸಂಗೀತ ವೃತ್ತಿಜೀವನದಲ್ಲಿ, ಕೆಕೆ ಭಾರತೀಯ ಸಂಗೀತ ಪ್ರೇಮಿಗಳಿಗೆ ಯಾರೂನ್ ದೋಸ್ತಿಯಂತಹ ಅನೇಕ ಹಿಟ್ ಗಳನ್ನು ನೀಡಿದರು.

ಭಾರತೀಯ ಚಿತ್ರರಂಗದಲ್ಲಿ ಬಹುಮುಖ ಗಾಯಕರಲ್ಲಿ ಒಬ್ಬರಾದ ಅವರು ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಬಂಗಾಳಿ ಸೇರಿದಂತೆ ಹಲವಾರು ಭಾಷೆಗಳನ್ನು ಹಾಡುಗಳನ್ನು ಹಾಡಿದ್ದಾರೆ. ಶಾರೂಖ್ ಖಾನ್ ನಟನೆಯ ಓಂ ಶಾಂತಿ ಓಂ ಸಿನಿಮಾದ ಆಂಖೋನ್ ಮೇ ತೇರಿ, ಬಚ್ನಾ ಏ ಹಸಿನೋ ಚಿತ್ರದ ಖುದಾ ಜಾನೆ , ಹಮ್ ದಿಲ್ ದೇ ಚುಕೆ ಸಮನ್ ಚಿತ್ರದ ತಾಡಾಪ್ ತಡಪ್ ಸೇರಿದಂತೆ ಹಲವು ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ.

- Advertisement -

Latest News

error: Content is protected !!