Thursday, June 4, 2026
Homeಚಿಕ್ಕಮಗಳೂರುಮತಾಂತರ ಮಾಡುತ್ತಿದ್ದ ಆರೋಪ: ಚಿಕ್ಕಮಗಳೂರಿನ ಖಾಸಗಿ ಹೋಟೆಲ್ ಮೇಲೆ ಬಜರಂಗದಳ ದಾಳಿ

ಮತಾಂತರ ಮಾಡುತ್ತಿದ್ದ ಆರೋಪ: ಚಿಕ್ಕಮಗಳೂರಿನ ಖಾಸಗಿ ಹೋಟೆಲ್ ಮೇಲೆ ಬಜರಂಗದಳ ದಾಳಿ

- Advertisement -
- Advertisement -

ಚಿಕ್ಕಮಗಳೂರು: ಮತಾಂತರ ಮಾಡುತ್ತಿರುವ ಆರೋಪದ ಮೇಲೆ ಚಿಕ್ಕಮಗಳೂರಿನ‌ ಖಾಸಗಿ ಹೋಟೆಲ್ ಮೇಲೆ ಬಜರಂಗದಳ ಕಾರ್ಯಕರ್ತರಿಂದ ದಾಳಿ ನಡೆದಿದೆ.

ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯಲ್ಲಿ ಘಟನೆ ನಡೆದಿದ್ದು, 50ಕ್ಕೂ ಹೆಚ್ಚು ಜನರನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಮಾಡುತ್ತಿದ್ದ ಆರೋಪ ವ್ಯಕ್ತವಾಗಿದೆ.

ಬಜರಂಗದಳ ದಾಳಿಯಿಂದಾಗಿ ಖಾಸಗಿ ಹೋಟೆಲ್ ನಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.

ಸ್ಥಳಕ್ಕೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!