Thursday, June 4, 2026
Homeತಾಜಾ ಸುದ್ದಿಶೌಚಾಲಯಕ್ಕೆ ತೆರಳಿ ಗೇಮ್ ನಲ್ಲಿ ಮೈಮರೆತ ಯುವಕ : ಸದ್ದಿಲ್ಲದೇ ಬಂದು ಆತನ ಕುಂಡೆಗೆ ಕಚ್ಚಿದ...

ಶೌಚಾಲಯಕ್ಕೆ ತೆರಳಿ ಗೇಮ್ ನಲ್ಲಿ ಮೈಮರೆತ ಯುವಕ : ಸದ್ದಿಲ್ಲದೇ ಬಂದು ಆತನ ಕುಂಡೆಗೆ ಕಚ್ಚಿದ ಹಾವು

- Advertisement -
- Advertisement -

ನ್ಯೂಸ್ ಡೆಸ್ಕ್ : ಸಾಮಾನ್ಯವಾಗಿ ಶೌಚಾಲಯಕ್ಕೆ ತೆರಳುವಾಗ ಮೊಬೈಲ್ ತೆಗೆದುಕೊಂಡು ಹೋಗುವುದು ಕೆಲವರ ಅಭ್ಯಾಸ. ಇದೇ ರೀತಿ ಯುವಕನೊಬ್ಬ ಶೌಚಾಲಯದಲ್ಲಿ ಕುಳಿತು ಗೇಮ್ ಆಡುತ್ತಿರುವಾಗ ಹಾವೊಂದು ಬಂದು ಕಚ್ಚಿರುವ ಘಟನೆ ನಡೆದಿದೆ.

ಎಂದಿನಂತೆ ಯುವಕನೊಬ್ಬ ಮೊಬೈಲ್ ಹಿಡಿದುಕೊಂಡು ಆ ಯುವಕ ಶೌಚಾಲಯಕ್ಕೆ ತೆರಳಿದ್ದಾನೆ. ಅದ್ಯಾವ ಘಳಿಗೆಯಲ್ಲಿ ಹಾವು ಆತನ ಶೌಚಾಲಯದೊಳಗೆ ಸೇರಿಕೊಂಡಿದೆಯೋ ಏನೋ. ಗೇಮ್ ಒಳಗೆ ಸಂಪೂರ್ಣವಾಗಿ ಮುಳುಗಿರೋ ಆತನಿಗೆ ಅದು ಗೊತ್ತಾಗಲೇ ಇಲ್ಲ. ಕೊನೆಗೆ ಅದೇ ಹಾವು ಆತನ ಪೃಷ್ಠಕ್ಕೆ ಕಚ್ಚಿದೆ. ಆಗಲೇ ಆ ಪುಣ್ಯಾತ್ಮ ವಾಸ್ತವ ಲೋಕಕ್ಕೆ ಬಂದಿದ್ದು.

ಹಾವು ಕಚ್ಚಿದ ಆಘಾತಕ್ಕೆ ಆತ ಸ್ನಾನದ ಮನೆಯ ಬಾಗಿಲನ್ನೇ ಒಡೆದು ಹೊರಗೆ ಓಡಿ ಬಂದಿದ್ದಾನೆ. ಹಾವು ವಿಷಕಾರಿ ಅಲ್ಲದೇ ಇರುವುದರಿಂದ ಆತನ ಜೀವಕ್ಕೆ ಏನೂ ಅಪಾಯವಾಗಿರಲಿಲ್ಲ. ಆದರೆ ಹಾವು ಕಚ್ಚಿದಾಕ್ಷಣ ಆತ ಭಯದಿಂದ ಹಾವನ್ನ ಹಿಡಿದು ಎಳೆದಿದ್ದಾನೆ. ಆದ್ದರಿಂದ ಎರಡು ವಾರದ ನಂತರವೂ ಗಾಯವಾಗಿರೋ ಪೃಷ್ಠದ ಭಾಗದಲ್ಲಿ ಹಾವಿನ ಹಲ್ಲು ಹಾಗೆಯೇ ಉಳಿದಿದೆ ಅಂತ ಆ ವ್ಯಕ್ತಿಗೆ ಚಿಕಿತ್ಸೆ ಕೊಟ್ಟಿರೋ ವೈದ್ಯರು ಹೇಳಿದ್ದಾರೆ.

ಟ್ವಿಟ್ ಮಾಡಿ ತನಗಾದ ಭಯಾನಕ ಅನುಭವವನ್ನ ಆ ಮಹಾನುಭಾವ ಹೇಳಿಕೊಂಡಿದ್ದಾನೆ. ಸುತ್ತಮುತ್ತಲೂ ಗಿಡಗಂಟಿಗಳು ಬೆಳೆದ ಪ್ರದೇಶವಾದ್ದರಿಂದ ಹಾವು ಇಲ್ಲಿ ಬಂದಿರಬಹುದು ಅಂತ ಹೇಳಲಾಗಿದೆ. ಈಗಾಗಲೇ ಅಗ್ನಿಶಾಮಕದಳದವರು ಬಂದು ಹಾವನ್ನ ಹಿಡಿದುಕೊಂಡು ಹೋಗಿ ಪ್ರಾಣಿದಯಾ ಸಂಘದವರಿಗೆ ಒಪ್ಪಿಸಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಟ್ವೀಟ್ ನಲ್ಲಿ ಮಾಹಿತಿ ನೀಡಿಲ್ಲ.

- Advertisement -

Latest News

error: Content is protected !!