Wednesday, June 3, 2026
Homeಕರಾವಳಿಡಿ.ಕೆ. ಶಿವಕುಮಾರ್ ಗೆ ವಿದ್ಯುತ್ ಸಮಸ್ಯೆ ಬಗ್ಗೆ ದೂರವಾಣಿಯಲ್ಲಿ ಬೈದಿದ್ದ ಗಿರಿಧರ ರೈ ಮನೆಗೆ ಮಾಜಿ...

ಡಿ.ಕೆ. ಶಿವಕುಮಾರ್ ಗೆ ವಿದ್ಯುತ್ ಸಮಸ್ಯೆ ಬಗ್ಗೆ ದೂರವಾಣಿಯಲ್ಲಿ ಬೈದಿದ್ದ ಗಿರಿಧರ ರೈ ಮನೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ

- Advertisement -
- Advertisement -

ಸುಳ್ಯ: ಮಾಜಿ ಇಂಧನ ಡಿ.ಕೆ. ಶಿವಕುಮಾರ್ ಅವರಿಗೆ ವಿದ್ಯುತ್ ಸಮಸ್ಯೆ ಕುರಿತಾಗಿ ದೂರವಾಣಿ ಕರೆ ಮಾಡಿ ಬೈದಿದ್ದಕ್ಕೆ ಬಂಧನಕ್ಕೊಳಗಾಗಿದ್ದ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಗಿರಿಧರ ರೈ ಅವರ ನಿವಾಸಕ್ಕೆ ಶಾಸಕ ಮತ್ತು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ.

ಸಚಿವ ಎಸ್.‌ ಅಂಗಾರ ಅವರೊಂದಿಗೆ ಭೇಟಿ ನೀಡಿದ್ದ ಸುರೇಶ್ ಕುಮಾರ್, ಗಿರಿಧರ ರೈ ಅವರ ತಾಯಿಯ ಆರೋಗ್ಯ ವಿಚಾರಿಸಿ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದ್ದಾರೆ.

2016 ರಲ್ಲಿ ಇಂಧನ ಸಚಿವ ಡಿ.ಕೆ.‌ ಶಿವಕುಮಾರ್ ಅವರಿಗೆ ಸಂಜೆ 7 ಗಂಟೆ ವೇಳೆಗೆ ವಿದ್ಯುತ್ ಸಮಸ್ಯೆ ಕುರಿತಾಗಿ ದೂರವಾಣಿ ಕರೆ ಮಾಡಿ ಬೈದಿದ್ದರು.

ಇದರಿಂದ ಸಿಟ್ಟಿಗೆದ್ದಿದ್ದ ಡಿ.ಕೆ. ಶಿವಕುಮಾರ್ ದೂರು ದಾಖಲಿಸಿದ್ದ ಕಾರಣ ರಾತ್ರೋ ರಾತ್ರಿ ಗಿರಿಧರ ರೈ ಮನೆಗೆ ಬಂದು ಬಂಧಿಸಿದ್ದರು.

ಸುಳ್ಯ ನ್ಯಾಯಾಲಯ ಇತ್ತೀಚೆಗೆ ಗಿರಿಧರ ರೈ ಅವರಿಗೆ ಶಿಕ್ಷೆ ಪ್ರಕಟಿಸಿತ್ತು. ಆದರೆ ಶಿಕ್ಷೆಗೆ ಮೇಲಿನ ಕೋರ್ಟ್ ತಡೆಯಾಜ್ಞೆ ನೀಡಿತ್ತು.

- Advertisement -

Latest News

error: Content is protected !!