- Advertisement -
![]()
- Advertisement -
ವಿಟ್ಲ:ವಾಟ್ಸಾಪ್ ಸ್ಟೇಟಸ್‌ನಲ್ಲಿ ಶಿವ ದೇವರನ್ನು ಅವಮಾನಿಸಿರುವ ಬಗ್ಗೆ ಹಿಂದೂ ಜಾಗರಣ ವೇದಿಕೆ ವಿಟ್ಲ ಪ್ರಖಂಡ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಟ್ಲ ಕಸಬಾದ ಒಕ್ಕೆತ್ತೂರು ಊರುದಂಗಡಿಯ ನಿವಾಸಿ ರಶೀದ್ ಎಂಬಾತ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಶಿವಲಿಂಗವನ್ನು ಅಸಭ್ಯವಾಗಿ ನಿಂದಿಸಿದ್ದಾನೆ ” ಸಾಬ್ರೆ…. ಒಳ ಉಡುಪುಗಳನ್ನು ಬಿಗಿಯಾಗಿ, ಸರಿಯಾಗಿ ಧರಿಸಿರಿ, ಅಕಸ್ಮಾತ್ “ಅವರ” ಕಣ್ಣಿಗೆ ಆ ಪವಿತ್ರ “ಲಿಂಗ” ನಮ್ಮದೇ ಎಂದು ಧಾಂಧಲೆ ಮಾಡಿಯಾರು ಜಾಗ್ರತೆ…..” ಎಂದು ಬರೆದುಕೊಂಡಿದ್ದಾನೆ. ಎಂದು ಹಿಂದೂ ಜಾಗರಣ ವೇದಿಕೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದೆ.
- Advertisement -


