Thursday, June 4, 2026
HomeWorldಮನೆಯೊಂದರಲ್ಲಿ ಹಣ ಕದ್ದು I Love You ಎಂದು ಬರೆದಿಟ್ಟು ಹೋದ ಕಳ್ಳರು

ಮನೆಯೊಂದರಲ್ಲಿ ಹಣ ಕದ್ದು I Love You ಎಂದು ಬರೆದಿಟ್ಟು ಹೋದ ಕಳ್ಳರು

- Advertisement -
- Advertisement -

ಗೋವಾ: ಕಳ್ಳರು ಗೋವಾದ ಬಂಗಲೆಯೊಂದಕ್ಕೆ ನುಗ್ಗಿ 20 ಲಕ್ಷ ರೂ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ವಿಚಿತ್ರವೆಂದರೆ ಕಳ್ಳರು ಎಸ್ಟೇಪ್ ಆಗುವ ಮೊದಲು ಮನೆ ಮಾಲೀಕರಿಗೆ ‘ಐ ಲವ್ ಯೂ’ ಸಂದೇಶವನ್ನು ಸಹ ಬಿಟ್ಟು ಹೋಗಿದ್ದಾರೆ.


ಮನೆ ಮಂದಿ ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಬಂಗಲೆಯ ಬಾತ್‌ರೂಮ್‌ನ ಗ್ರಿಲ್ ಕತ್ತರಿಸಿ ಒಳ ಪ್ರವೇಶಿಸಿದ ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕುಟುಂಬವು ಮನೆಗೆ ಹಿಂದಿರುಗಿದಾಗ, ಟಿವಿ ಪರದೆಯ ಮೇಲೆ ಐ ಲವ್ ಯು ಬರೆದವರು ಯಾರು ಎಂದು ಆಶ್ಚರ್ಯ ಪಡುತ್ತಾರೆ.


ಮನೆಯವರು ಎಲ್ಲಾ ಕೊಠಡಿಗಳನ್ನು ಪರಿಶೀಲಿಸಿದಾಗ ಎಲ್ಲವೂ ಅಸ್ತವ್ಯಸ್ತವಾಗಿರುವುದು ಕಂಡು ಮನೆಯಲ್ಲಿ ಕಳ್ಳತನವಾಗಿದೆ. ಎಂದು ಗಮನಕ್ಕೆ ಬರುತ್ತದೆ.9 ಜೋಡಿ ಬಳೆಗಳು, ಒಂದು ಸರ, ಎರಡು ನೆಕ್ಕೇಸ್‌ಗಳು, ಬೆಳ್ಳಿ ಬಿಸ್ಕತ್ತು, ಬಳೆಗಳು, ಲಾಕೆಟ್‌ಗಳು, ಮಂಗಲಸೂತ್ರ ಕಳ್ಳತನವಾಗಿದೆ ಎಂದು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!