Sunday, June 7, 2026
Homeಕರಾವಳಿಕಾರ್ಕಳ: ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಅಕ್ಷತಾ ಪೂಜಾರಿಗೆ ಬೆಳ್ಳಿ ಪದಕ

ಕಾರ್ಕಳ: ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಅಕ್ಷತಾ ಪೂಜಾರಿಗೆ ಬೆಳ್ಳಿ ಪದಕ

- Advertisement -
- Advertisement -

ಕಾರ್ಕಳ: ಕಜಕಿಸ್ತಾನದಲ್ಲಿ ನಡೆದ ವಿಶ್ವ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್‍ನಲ್ಲಿ ಕಾರ್ಕಳದ ಅಕ್ಷತಾ ಪೂಜಾರಿ ಬೆಳ್ಳಿ ಪದಕವನ್ನು ಗೆದ್ದು ಕರವಾಳಿಗೆ ಹೆಮ್ಮೆ ತಂದಿದ್ದಾರೆ.
ಈ ವರ್ಷ ಕಜಕಿಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್ಶಿಪ್‍ನಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಉಡುಪಿಯ ಅಕ್ಷತಾ ಪೂಜಾರಿ ಬೋಳ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹಲವು ಚಿನ್ನದ ಪದಕ ಗೆದ್ದಿದ್ದಾರೆ. ಕಳೆದ ಬಾರಿಯ ಏಕಲವ್ಯ ಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ.

ಅಕ್ಷತಾ ಅವರು ರಾಜ್ಯ ಮಟ್ಟದಲ್ಲಿ 10 ಚಿನ್ನ, 2 ಬೆಳ್ಳಿ ಪದಕಗಳೊಂದಿಗೆ 5 ಬಾರಿ ಸ್ಟ್ರಾಂಗ್ ವುಮನ್ ಪ್ರಶಸ್ತಿಗೆ ಭಾಜನರಾಗಿದ್ದರು. ರಾಷ್ಟ್ರಮಟ್ಟದಲ್ಲಿ 10 ಚಿನ್ನ, 2 ಬೆಳ್ಳಿ ಪದಕಗಳೊಂದಿಗೆ 4 ಬಾರಿ ಸ್ಟ್ರಾಂಗ್ ವುಮನ್ ಪ್ರಶಸ್ತಿ ಗೆದ್ದಿದ್ದಾರೆ. ಏಷ್ಯಾ ಮಟ್ಟದಲ್ಲೂ 4 ಬಾರಿ ಚಿನ್ನ, ಕಾಮನ್ ವೆಲ್ತ್ ಕೂಟದಲ್ಲಿ 8 ಚಿನ್ನ, ವಿಶ್ವ ಮಟ್ಟದಲ್ಲಿ 2 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

- Advertisement -

Latest News

error: Content is protected !!