Saturday, June 6, 2026
Homeತಾಜಾ ಸುದ್ದಿಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಿಜೆಪಿ ಅಭ್ಯರ್ಥಿ ಏರ್ ಲಿಫ್ಟ್

ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಿಜೆಪಿ ಅಭ್ಯರ್ಥಿ ಏರ್ ಲಿಫ್ಟ್

- Advertisement -
- Advertisement -

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಆಗಮಿಸಲು ಅಭ್ಯರ್ಥಿಗೆ ಬಿಜೆಪಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದೆ.

ಅಭ್ಯರ್ಥಿ ಹೇಮಲತಾ ನಾಯಕ್ ರನ್ನು ಏರ್ ಲಿಫ್ಟ್ ಮಾಡಲಾಗಿದ್ದು,ತುಮಕೂರಿನಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಕರೆತರಲಾಗಿದೆ.

ಕೊಪ್ಪಳದಿಂದ ತುಮಕೂರುವರೆಗೆ ಕಾರಿನಲ್ಲಿ ಬಂದಿದ್ದ ಅಭ್ಯರ್ಥಿ ಹೇಮಲತಾ ಬೆಂಗಳೂರು ತಲುಪುವುದು ತಡವಾಗುತ್ತಿದ್ದ ಹಿನ್ನೆಲೆಯಲ್ಲಿ ಏರ್ ಲಿಫ್ಟ್ ಮಾಡಲಾಗಿದೆ.

ತುಮಕೂರಿನಿಂದ ಜಕ್ಕೂರು ಏರೋಡ್ರಂವರೆಗೆ ಹೆಲಿಕಾಪ್ಟರ್ ನಲ್ಲಿ ಬಂದು ಜಕ್ಕೂರಿನಿಂದ ಕಾರಿನಲ್ಲಿ ಬೆಂಗಳೂರು ತಲುಪಿದ್ದಾರೆ. ಬಿಜೆಪಿ ಕಚೇರಿಗೆ ಆಗಮಿಸಿ ಬಿ ಫಾರ್ಮ್ ಪಡೆದು ವಿಧಾನಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಕೆ ತಡವಾಗುವ ಕಾರಣಕ್ಕೆ ಏರ್ ಲಿಫ್ಟ್ ಮಾಡಿಸಿ ನಾಮಪತ್ರ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ.

- Advertisement -

Latest News

error: Content is protected !!