Wednesday, June 3, 2026
HomeUncategorizedಗಂಡನ ಮನೆಯಲ್ಲಿ ಪತ್ನಿ ಆತ್ಮಹತ್ಯೆ: ಕುಟುಂಬಸ್ಥರ ನಡುವೆ ಮಾರಾಮಾರಿ

ಗಂಡನ ಮನೆಯಲ್ಲಿ ಪತ್ನಿ ಆತ್ಮಹತ್ಯೆ: ಕುಟುಂಬಸ್ಥರ ನಡುವೆ ಮಾರಾಮಾರಿ

- Advertisement -
- Advertisement -

ಹಾಸನ: ಗಂಡನ ಮನೆಯಲ್ಲಿ ಗೃಹಿಣಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದ ವಿದ್ಯಾನಗರದಲ್ಲಿನಡೆದಿದೆ.


ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ರಂಜಿತಾ(31) ಆತ್ಮಹತ್ಯೆಗೆ ಶರಣಾದವರು.


ಪತಿ ಹಾಗೂ ಅತ್ತೆ ಮಾವನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಪಡುವಲಹಿಪ್ಪೆ ಗ್ರಾಮದ ರಂಜಿತಾ(31) ಹಾಸನದ ಅಕ್ಷಯ್ ಜೊತೆ ವಿವಾಹವಾಗಿದ್ದರು. ಗಂಡನ ಮನೆಯವರು ರಂಜಿತಾಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಗಂಡನ ಮನೆಯವರೇ ಹತ್ಯೆಮಾಡಿ ನೇಣು ಹಾಕಿದ್ದಾರೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

ಮಗಳ ಸಾವಿನಿಂದ ರೊಚ್ಚಿಗೆದ್ದ ರಂಜಿತಾ ಸಂಬಂಧಿಕರು ಅಕ್ಷಯ್ ಮನೆ ಮುಂದೆ ಗಲಾಟೆ ನಡೆಸಿದ್ದು, ಕುಟುಂಬಸ್ಥರ ನಡುವೆ ಮಾರಾಮಾರಿ ನಡೆದಿದೆ.

- Advertisement -

Latest News

error: Content is protected !!