Thursday, June 4, 2026
Homeಕರಾವಳಿವಿಟ್ಲ: ಕಾರು ಚಾಲಕನ ಹುಚ್ಚಾಟಕ್ಕೆ ಕಂಗಲಾದ ಮಹಿಳೆಯರು

ವಿಟ್ಲ: ಕಾರು ಚಾಲಕನ ಹುಚ್ಚಾಟಕ್ಕೆ ಕಂಗಲಾದ ಮಹಿಳೆಯರು

- Advertisement -
- Advertisement -

ವಿಟ್ಲ:ಕಾರು ಚಾಲಕನ ಹುಚ್ಚಾಟಕ್ಕೆ ಮಹಿಳೆಯರು ಕಂಗಲಾದ ಘಟನೆ ವಿಟ್ಲದಲ್ಲಿ ನಡೆದಿದೆ. ಮಂಗಳೂರಿನ ತೊಕ್ಕೊಟ್ಟಿನ ವೀಲಾರು ಎಂಬಲ್ಲಿಯ ಮಹಿಳೆಯರು ಪಣೋಲಿಬೈಲಿಗೆಂದು ಕಾರು ಮಾಡಿಕೊಂಡು ಬಂದಿದ್ದಾರೆ.

ಕಾರು ಸಾಲೆತ್ತೂರು ಬಳಿ ಬರುತ್ತಿದ್ದಂತೆ ಕಾರು ಚಾಲಕ ಸಾಗರ್ ಬೇಕಾಬಿಟ್ಟಿ ಕಾರು ಚಲಾಯಿಸಿದ್ದಾನೆ. ಇದರಿಂದ ಕಾರಿನಲ್ಲಿದ್ದ ಮಹಿಳೆಯರು ಗಾಬರಿಗೊಂಡು ಜೋರಾಗಿ ಕಿರುಚಿದ್ದಾರೆ. ಮಹಿಳೆಯರು ಕಿರುಚುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು ಮಹಿಳೆಯರನ್ನು ಅಪಹರಣ ಮಾಡುತ್ತಿದ್ದಾರೆಂದು ಭಾವಿಸಿ ಕಾರನ್ನು ಬೆನ್ನತ್ತಿ ಹೋಗಿ ನಿಲ್ಲಿಸಿದ್ದಾರೆ.

ಬಳಿಕ ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಕಾರು ಚಾಲಕ ಕಾಡು ಮಠ ನಿವಾಸಿ ಸಾಗರ್ ಎಂಬಾತನನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!