Thursday, June 4, 2026
Homeತಾಜಾ ಸುದ್ದಿ300 ಸಹಾಯಕ ಕೃಷಿ ಅಧಿಕಾರಿಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ

300 ಸಹಾಯಕ ಕೃಷಿ ಅಧಿಕಾರಿಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ

- Advertisement -
- Advertisement -

ಬೆಂಗಳೂರು: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ನೇರ ನೇಮಕಾತಿ ಮೂಲಕ ಭರ್ತಿಗೆ ಸೂಚನೆ ನೀಡಲಾಗಿದ್ದು, ಕೃಷಿ ಇಲಾಖೆ ಕಾರ್ಯದರ್ಶಿಯಿಂದ ಆಯುಕ್ತರಿಗೆ ನೇಮಕಾತಿ ಸಂಬಂಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲ್ಪಟ್ಟಿದೆ.

ನೇಮಕಾತಿ ನಡೆಸಲ್ಪಡುವ ಒಟ್ಟು ಹುದ್ದೆಗಳ ಪೈಕಿ 85% ಹುದ್ದೆಗಳಿಗೆ ಕೃಷಿ ವಿಷಯದಲ್ಲಿ ಸ್ನಾತಕ ಪದವಿ ಪಡೆದಿರುವವರನ್ನು, ಉಳಿದ 15% ಹುದ್ದೆಗಳಿಗೆ ಅಗ್ರಿಕಲ್ಚರ್ ‌ಇಂಜಿನಿಯರಿಂಗ್, ಫುಡ್ ಟೆಕ್ನಾಲಜಿ, ಫುಡ್ ಸೈನ್ಸ್ ಮತ್ತು ಟೆಕ್ನಾಲಜಿ, ಬಯೋ ಟೆಕ್ನಾಲಜಿಯಲ್ಲಿ ಬಿ.ಟೆಕ್ ಪದವಿ ಪಡೆದಿರುವವರನ್ನು ನೇಮಕ ಮಾಡಿಕೊಳ್ಳಲು‌ ನಿರ್ಧರಿಸಲಾಗಿದೆ.

- Advertisement -

Latest News

error: Content is protected !!