Saturday, June 6, 2026
Homeಕರಾವಳಿಹೈಕೋರ್ಟ್ ಆದೇಶಕ್ಕಿಲ್ಲ ಕಿಂಚಿತ್ತು ಬೆಲೆ; ದಕ್ಷಿಣಕನ್ನಡ ಜಿಲ್ಲೆಯ ಹಲವು ಶಾಲೆಗಳಲ್ಲಿ ಗಣಹೋಮ, ಶಾರದಾಪೂಜೆ

ಹೈಕೋರ್ಟ್ ಆದೇಶಕ್ಕಿಲ್ಲ ಕಿಂಚಿತ್ತು ಬೆಲೆ; ದಕ್ಷಿಣಕನ್ನಡ ಜಿಲ್ಲೆಯ ಹಲವು ಶಾಲೆಗಳಲ್ಲಿ ಗಣಹೋಮ, ಶಾರದಾಪೂಜೆ

- Advertisement -
- Advertisement -

ಮಂಗಳೂರು; ಶಾಲೆಗಳಲ್ಲಿ ಯಾವುದೇ ಧಾರ್ಮಿಕ‌ ಗುರುತುಗಳನ್ನು, ಆಚರಣೆಗಳನ್ನು ಮಾಡಬಾರದು ಎಂಬ ಹೈಕೋರ್ಟ್ ಇತ್ತೀಚಿನ ಆದೇಶವಿದ್ದರೂ ಜಿಲ್ಲೆಯ ಕೆಲ ಸರಕಾರಿ‌ ಶಾಲೆಗಳಲ್ಲಿ ಗಣಹೋಮ ಹಾಗೂ ಶಾರದಾಪೂಜೆ ಮಾಡಲಾಗಿದೆ.

36 ಶೈಕ್ಷಣಿಕ ವರ್ಷದ ಮೊದಲ ದಿನವೇ ಹೈಕೋರ್ಟ್ ಆದೇಶ ಉಲ್ಲಂಘನೆಯಾಗಿದೆ.
ವಿಟ್ಲ ‌ಕೇಪು ಸಮೀಪದ ಪಡಿಬಾಗಿಲು, ಸುಳ್ಯ ಹರಿಹರಪಳ್ಳತ್ತಡ್ಕ ಸೇರಿ ಕರಾವಳಿಯ ಕೆಲವು ಶಾಲೆಗಳಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿ ಪೂಜೆ ಮಾಡಲಾಗಿದೆ.

ಈ ಮೊದಲು‌ ಶಾಲೆಗಳಲ್ಲಿ ಶಾರದಾಪೂಜೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಸಾಮರಸ್ಯದಿಂದ ನಡೆಯುತ್ತಿತ್ತು. ಇತ್ತೀಚೆಗೆ ಹಿಜಾಬ್ ವಿವಾದದಿಂದಾಗಿ ಹೈಕೋರ್ಟ್ ಖಡಕ್ ಸೂಚನೆ‌ ನೀಡಿ‌ ಶಾಲೆಗಳಲ್ಲಿ‌ ಧಾರ್ಮಿಕ ಗುರುತು, ಆಚರಣೆ ಮಾಡದಂತೆ ಆದೇಶ ನೀಡಿತ್ತು. ಆದರೆ ಇದೀಗ ಕೆಲವು ಶಾಲೆಗಳು ಹೈಕೋರ್ಟ್ ಆದೇಶವನ್ನು ಗಾಳಿಗೆ ತೂರಿವೆ

- Advertisement -

Latest News

error: Content is protected !!