- Advertisement -
![]()
- Advertisement -
ಮಹಾರಾಷ್ಟ್ರ: ಹೆಂಡ್ತಿಗೆ ಸರಿಯಾಗಿ ಸೀರೆ ಉಡೋದಕ್ಕೆ ಬರಲ್ಲ ಅಂತಾ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ. 24 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಸರಿಯಾಗಿ ಸೀರೆ ಉಡಲು ಮತ್ತು ಮಾತನಾಡಲು ಬರಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಕುಂದನಗರದ ನಿವಾಸಿ ಸಮಾಧಾನ್ ಸಾಬಲ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತನ ಕೊಠಡಿಯಿಂದ ಡೆತ್ ನೋಟ್ ವಶಪಡಿಸಿಕೊಂಡಿದ್ದು, ಅದರಲ್ಲಿ ತನ್ನ ಹೆಂಡತಿಗೆ ಸರಿಯಾಗಿ ಸೀರೆ ಉಡಲು ಬರುವುದಿಲ್ಲ, ಸರಿಯಾಗಿ ನಡೆಯಲು, ಮಾತನಾಡಲು ಬರುವುದಿಲ್ಲ ಎಂದು ಉಲ್ಲೇಖಿಸಿದ್ದಾನೆ ಎಂದು ಮುಕುಂದವಾಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.
ಈ ವ್ಯಕ್ತಿ ಆರು ತಿಂಗಳ ಹಿಂದೆ ತನಗಿಂತ ವಯಸ್ಸಿನಲ್ಲಿ 6 ವರ್ಷ ಹಿರಿಯಳಾದ ಮಹಿಳೆಯನ್ನು ಮದುವೆಯಾಗಿದ್ದ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
- Advertisement -


