Thursday, June 4, 2026
Homeಕರಾವಳಿಮಳೆಗಾಲ ಮುಗಿಯುವವರೆಗೂ ಹೊಸ ನಿರ್ಮಾಣ ಕಾಮಗಾರಿ ಆರಂಭಿಸುವಂತಿಲ್ಲ ; ಮಂಗಳೂರು ಮಹಾನಗರ ಪಾಲಿಕೆ ಆದೇಶ

ಮಳೆಗಾಲ ಮುಗಿಯುವವರೆಗೂ ಹೊಸ ನಿರ್ಮಾಣ ಕಾಮಗಾರಿ ಆರಂಭಿಸುವಂತಿಲ್ಲ ; ಮಂಗಳೂರು ಮಹಾನಗರ ಪಾಲಿಕೆ ಆದೇಶ

- Advertisement -
- Advertisement -

ಮಂಗಳೂರು: ಮೇ 17 ರಿಂದ ಮೇ 19 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಮುಗಿಯುವವರೆಗೆ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಮಾಡದಂತೆ ಸೂಚಿಸಲಾಗಿದೆ.

ಅಲ್ಲದೇ ಗುಡ್ಡ ಅಗೆದು ನಿವೇಶನ ಸಮತಟ್ಟುಗೊಳಿಸಿ ಮಣ್ಣು ಸಾಗಾಟ ಮಾಡುವುದನ್ನು ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ.

ಈಗಾಗಲೇ ಆರಂಭವಾಗಿರುವ ನಿರ್ಮಾಣ ಕಾಮಗಾರಿಯ ಅಕ್ಕ ಪಕ್ಕದ ನಿವೇಶನಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿರುವ ಮಹಾನಗರ ಪಾಲಿಕೆ, ಮಳೆಗಾಲ ಮುಗಿದ ನಂತರ ಹೊಸ ಕಾಮಗಾರಿ ಆರಂಭ ಮಾಡುವಂತೆ ತಿಳಿಸಿದೆ.

ಪಾಲಿಕೆ ಆದೇಶ ಉಲ್ಲಂಘಿಸಿದಲ್ಲಿ ಕೆ.ಎಂ.ಸಿ. ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಮಂಗಳೂರು ಮಹಾನಗರ ಪಾಲಿಕೆ ನೀಡಿದೆ.

- Advertisement -

Latest News

error: Content is protected !!