Wednesday, June 3, 2026
Homeಕರಾವಳಿಸುಳ್ಯ: ಐವರ್ನಾಡಿನ ಬೇಂಗಮಲೆ ರಸ್ತೆ ಬದಿಯಲ್ಲಿ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಹುಡಿ ಪ್ಯಾಕೆಟ್ ಗಳು...

ಸುಳ್ಯ: ಐವರ್ನಾಡಿನ ಬೇಂಗಮಲೆ ರಸ್ತೆ ಬದಿಯಲ್ಲಿ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಹುಡಿ ಪ್ಯಾಕೆಟ್ ಗಳು ಪತ್ತೆ

- Advertisement -
- Advertisement -

ಸುಳ್ಯ: ಐವರ್ನಾಡು ಗ್ರಾಮದ ಬೇಂಗಮಲೆಯಲ್ಲಿ ರಸ್ತೆ ಬದಿ ಕ್ಷೀರಭಾಗ್ಯ ಯೋಜನೆಗೆ ಸಂಬಂಧಿಸಿದ ಹಾಲಿನ ಹುಡಿಯ ಪ್ಯಾಕೆಟ್ ಗಳನ್ನು ಪತ್ತೆಯಾಗಿವೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ರವರು ಪರಿಶೀಲಿಸುವ ಸಂದರ್ಭದಲ್ಲಿ ಹಾಲಿನ ಹುಡಿಯ ಪ್ಯಾಕೆಟ್ ಗಳು ಪತ್ತೆಯಾಗಿವೆ.

ಸರಕಾರದ ಯೋಜನೆಯಡಿ ಉಚಿತವಾಗಿ ಶಾಲಾ ವಿದ್ಯಾರ್ಥಿಗಳಿಗೆ ನೀಡಲು ವಿತರಣೆಯಾಗಿರುವ ಕ್ಷೀರಭಾಗ್ಯ ಹಾಲಿನ ಪ್ಯಾಕೆಟ್ ಗಳು ಮಕ್ಕಳಿಗೆ ವಿತರಣೆಯಾಗದೆ ರಸ್ತೆಯ ಬದಿ ಎಸೆದಿರುವುದಕ್ಕೆ ಸ್ಥಳೀಯರು ಅನುಮಾನ ವ್ಯಕ್ತ ಪಡಿಸಿದ್ದಾರೆ.

ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದ ಹಲವು ಜನರನ್ನು ಪತ್ತೆಹಚ್ಚಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಹಾಗೂ ಸಿಬ್ಬಂದಿಗಳು ಪಂಚಾಯತ್ ವತಿಯಿಂದ ದಂಡ ವಿಧಿಸಿದ್ದಾರೆ. ಆದರೂ ಈಗಲೂ ತ್ಯಾಜ್ಯ ಎಸೆಯುತ್ತಿರುವುದು ಕಂಡು ಬರುತ್ತಿದೆ.

- Advertisement -

Latest News

error: Content is protected !!