Thursday, June 4, 2026
Homeಕರಾವಳಿಮುಸ್ಲಿಮರ ಓಟು ಬೇಡ ಎಂಬ ಶಾಸಕ ಪೂಂಜಾ ಹೇಳಿಕೆ ವಿಚಾರ: ಹರೀಶ್ ಪೂಂಜಾಗೆ ಯು.ಟಿ. ಖಾದರ್...

ಮುಸ್ಲಿಮರ ಓಟು ಬೇಡ ಎಂಬ ಶಾಸಕ ಪೂಂಜಾ ಹೇಳಿಕೆ ವಿಚಾರ: ಹರೀಶ್ ಪೂಂಜಾಗೆ ಯು.ಟಿ. ಖಾದರ್ ತಿರುಗೇಟು

- Advertisement -
- Advertisement -

ಮಂಗಳೂರು: ಮುಸ್ಲಿಮರ ಓಟು ಬೇಡ, ಹಿಂದೂಗಳ ಓಟು ಸಾಕು ಎಂಬ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ವಿಚಾರಕ್ಕೆ ವಿಧಾನಸಭೆ ವಿಪಕ್ಷ ನಾಯಕ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾತನಾಡಿದ ಖಾದರ್,
ಬೆಳ್ತಂಗಡಿ ಶಾಸಕರದ್ದು ಅಪ್ರಬುದ್ದ ಮಾತು, ಅದೊಂದು ಕೀಳು ರಾಜಕೀಯ, ಅದಕ್ಕೆ ನಾನು ಉತ್ತರ ಕೊಡಲ್ಲ, ಅದಕ್ಕೆ ಬೆಳ್ತಂಗಡಿ ಜ‌ನ ಉತ್ತರ ಕೊಡ್ತಾರೆ ಎಂದು ಹೇಳಿದ್ದಾರೆ.

ಅಲ್ಲದೇ ಓಟು ಕೊಟ್ಟ ಜನರಿಗಾದ್ರೂ ಮೊದಲು ಇವರು ಕೆಲಸ ಮಾಡಲಿ‌. ಅಲ್ಲಿನ ಎಂಡೋಸಲ್ಫಾನ್ ಪೀಡಿತರಿಗೆ ಇವರು ಏನು ಮಾಡಿದ್ರು? ಎಂದು ಖಾದರ್ ಪ್ರಶ್ನಿಸಿದ್ದಾರೆ.

ಮೊದಲು ಇವರು ಎಂಡೋ ಸಲ್ಫಾನ್ ಪೀಡಿತರಿಗೆ ಮಾಡಲಿ, ಅದು ಬಿಟ್ಟು ಇದೆಲ್ಲಾ ಅಲ್ಲ ಎಂದೂ ಯು.ಟಿ. ಖಾದರ್ ಹೇಳಿದ್ದಾರೆ.

- Advertisement -

Latest News

error: Content is protected !!