Thursday, June 4, 2026
Homeತಾಜಾ ಸುದ್ದಿಸಾಯುವ ಕೆಲವೇ ನಿಮಿಷ ಮೊದಲು ತನ್ನ ಕೊನೆಯ ಆಸೆ ಈಡೇರಿಸಿಕೊಂಡ ವೃದ್ಧ

ಸಾಯುವ ಕೆಲವೇ ನಿಮಿಷ ಮೊದಲು ತನ್ನ ಕೊನೆಯ ಆಸೆ ಈಡೇರಿಸಿಕೊಂಡ ವೃದ್ಧ

- Advertisement -
- Advertisement -

ಜಾರ್ಖಂಡ್‌ : ವೃದ್ಧರೊಬ್ಬರು ಸಾಯುವ ಕೆಲವೇ ನಿಮಿಷ ಮೊದಲು ತಮ್ಮ ಕೊನೆಯ ಆಸೆ ಈಡೇರಿಸಿಕೊಂಡ ಘಟನೆ ಜಾರ್ಖಂಡ್ ನ ಹಜಾರಿಬಾಗ್ ಪಂಚಾಯತ್‌ನ ಬೆಲಾಹಿಯ ಪರ್ತಪುರ ಗ್ರಾಮದಲ್ಲಿ ನಡೆದಿದೆ.
ವರುಣ್ ಸಾಹು (105) ಎನ್ನುವ ವೃದ್ಧ ತಾನು ಸಾಯುವ 30 ನಿಮಿಷಗಳ ಮೊದಲು ಮತದಾನ ಮಾಡುವ ಮೂಲಕ ಜಗತ್ತಿಗೆ ವಿದಾಯ ಹೇಳಿದರು. ವರುಣ್ ಸಾಹು ಅವರ ಜೀವನದ ಕೊನೆಯ ಆಸೆಯೆಂದ್ರೆ ಮತದಾನದ ಅರ್ಧ ಗಂಟೆಯ ನಂತ್ರ ಮನೆಯಲ್ಲಿ ಸಾಯುವುದಾಗಿತ್ತಂತೆ.
ಅದ್ರಂತೆ, ಒಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ ಪೂರೈಸಿದ ವರುಣ್ ಸಾಹು, ಮೊದಲು ಪಂಚಾಯತ್ ಚುನಾವಣೆಯಲ್ಲಿ ಮತ ಚಲಾಯಿಸಿದರು.
ಸಾಮಾಜಿಕ ಕಾರ್ಯಕರ್ತ ಗಜಧರ್ ಪ್ರಸಾದ್ ಅವರು ತಮ್ಮ ಕೊನೆಯ ಆಸೆಯ ಬಗ್ಗೆ ಈಗಾಗಲೇ ತಮ್ಮ ಕುಟುಂಬಕ್ಕೆ ಮೊದಲೇ ತಿಳಿಸಿದ್ದರಂತೆ. 105 ವರ್ಷದ ವರುಣ್ ಸಾಹು ಅವ್ರು ಬೆಲಾಹಿ ಪಂಚಾಯತ್‌ನ ಬೂತ್ ಸಂಖ್ಯೆ 256 ರಲ್ಲಿ ಮತ ಚಲಾಯಿಸಿದರು. ಮನೆಗೆ ಹಿಂದಿರುಗಿದ ನಂತ್ರ ಮಧ್ಯಾಹ್ನ 3:20ಕ್ಕೆ ಕೊನೆಯುಸಿರೆಳೆದರು.
ಸಾಯುವ ಮುನ್ನ, ‘ಈ ವಯಸ್ಸಿನಲ್ಲಿಯೂ ನಾನು ಪ್ರಜಾಪ್ರಭುತ್ವದಲ್ಲಿ ನನ್ನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿದ್ದು ನನ್ನ ಅದೃಷ್ಟ’ ಎಂದು ಅವರು ಹೇಳಿದ್ದಾರಂತೆ.

- Advertisement -

Latest News

error: Content is protected !!